ಕಾರ್ಕಳ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಏರೋ ಕ್ಲಬ್ ತಂಡವು ಇತ್ತೀಚೆಗೆ ಬೆಂಗಳೂರಿನ ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ನಡೆದ ಬೋಯಿಂಗ್ 2023ರ ಏರೋ ಮಾಡಲಿಂಗ್ ಸ್ಪರ್ಧೆಯ 8ನೇ ಆವೃತ್ತಿಯಲ್ಲಿ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಗಳಿಸಿದೆ. ಈ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ದೇಶದ ವಿವಿಧ ಕಾಲೇಜುಗಳ 12 ತಂಡಗಳಲ್ಲಿ 5 ತಂಡಗಳು ನಿಟ್ಟೆ ತಾಂತ್ರಿಕ ಕಾಲೇಜಿನದ್ದಾಗಿತ್ತು ಎಂಬುದು ಕಾಲೇಜಿಗೆ ಹೆಮ್ಮೆಯ ವಿಚಾರ.
ತಂಡದಲ್ಲಿ ಪೈಲೆಟ್ ಆಗಿ ಅಮನ್ ಕುಮಾರ್ ಶ್ರೀವಾಸ್ತವ್, ಕೋ ಪೈಲೆಟ್ ಆಗಿ ಗಗನ್ ಜಿ. ನಾಯಕ್, ಕ್ಯಾಪ್ಟನ್ ಶರಣ್ಯ ಆಚಾರ್, ನಿಶ್ಮಿತಾ ಎರಡನೇ ತಂಡದದಲ್ಲಿದ್ದರು. ಮೂರನೇ ಪ್ರಶಸ್ತಿ ಪಡೆದ ತಂಡದಲ್ಲಿ ಪೈಲೆಟ್ ಆಗಿ ರತನ್ ರಾಜ್, ಕೋ ಪೈಲೆಟ್ ಆಗಿ ದಿವ್ಯಾಮ್ಶು, ಕ್ಯಾಪ್ಟನ್ ಆಗಿ ನ್ಯಾನ್ಸಿ ಪರ್ಮಾರ್ ಹಾಗೂ ಅನಂತಕೃಷ್ಣ ಸದಸ್ಯರಾಗಿದ್ದರು.


























