ಕಾರ್ಕಳ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ
ಕಾರ್ಕಳ : ಕಾರ್ಕಳ ಪುರಸಭೆ ವ್ಯಾಪ್ತಿಯ ಕೆಎಂಇಎಸ್ ಶಾಲೆಯ ಬಳಿ ಬಾವಿಗೆ ಬಿದ್ದಿದ್ದ ಮಹಿಳೆಯನ್ನು ಅಗ್ನಿಶಾಮಕ ಪಡೆಯವರು ರಕ್ಷಿಸಿದ್ದಾರೆ. ನಸೀಬ ಭಾನು(33) ಎಂಬ ಮಹಿಳೆ ಗುರುವಾರ ಸಂಜೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದರು. ಸ್ಥಳಕ್ಕೆ ಧಾವಿಸಿದ ಕಾರ್ಕಳ ಅಗ್ನಿಶಾಮಕ ಪಡೆ ಸಿಬ್ಬಂದಿ ಮಹಿಳೆಯನ್ನು ಬಾವಿಯಿಂದ ಮೇಲೆತ್ತಿ ರಕ್ಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಿಬ್ಬಂದಿ ಅಚ್ಯುತ್ ಕರ್ಕೇರ, ಜಯ ಮೂಲ್ಯ, ಸುರೇಶ್ ಕುಮಾರ್, ರಫೀಕ್, ಸುಜಯ್, ವಿನಾಯಕ ಪಾಲ್ಗೊಂಡಿದ್ದರು.
























