ಕಾರ್ಕಳದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಮಹಿಳೆಯರಿಂದ ನಿರ್ವಹಿಸಲ್ಪಡುವ 5 ಸಖಿ ಮತಗಟ್ಟೆ

ಕಾರ್ಕಳ : ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಕ್ಷೇತ್ರದಲ್ಲಿ 157 ಸಾಮಾನ್ಯ ಮತಗಟ್ಟೆ, 27 ನಕ್ಸಲ್‌ ಪೀಡಿತ ಮತಗಟ್ಟೆಗಳೊಂದಿಗೆ 52 ಸೂಕ್ಷ್ಮ ಮತಗಟ್ಟೆ ಸೇರಿದಂತೆ 209 ಮತಗಟ್ಟೆಗಳಿದೆ.

ಸಖಿ ಮತಗಟ್ಟೆ
ಕಾರ್ಕಳ ತಾಲೂಕಿನಲ್ಲಿ 3 ಮತ್ತು ಹೆಬ್ರಿ ತಾಲೂಕಿನಲ್ಲಿ 2 ಸೇರಿದಂತೆ ಒಟ್ಟು 5 ಸಖಿ ಮತಗಟ್ಟೆಗಳಿದ್ದು, ಇಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು, ಮತಗಟ್ಟೆ ಸಹಾಯಕರು, ಕಾವಲು ಸಿಬ್ಬಂದಿವರೆಗೆ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ. ನಿಟ್ಟೆಯಲ್ಲಿ 1 ಪಿಡಬ್ಲೂಡಿ ಮತಗಟ್ಟೆ ಮತ್ತು ಕುಕ್ಕುಂದೂರು ಗ್ರಾ. ಪಂ. ಯಲ್ಲಿ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ 1 ಮತಗಟ್ಟೆಯಿದೆ.

ಸಿಬ್ಬಂದಿ
209 ಮತಗಟ್ಟೆಯಲ್ಲಿ 1 ಪಿಆರ್‌ಓ, 1 ಎಪಿಆರ್‌ಓ, 2 ಪೋಲಿಂಗ್‌ ಆಫೀಸರ್‌ ಹಾಗೂ 1 ಡಿ ಗ್ರೂಪ್‌ನ್ನು ಒಳಗೊಂಡ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಯ ಪ್ರಯಾಣಕ್ಕಾಗಿ ವಾಹನ ವ್ಯವಸ್ಥೆ ಮಾಡಲಾಗಿದೆ.

ಪೊಲೀಸ್‌ ನಿಯೋಜನೆ
ನಿರ್ಭೀತಿಯಿಂದ ಮುಕ್ತವಾಗಿ ಮತದಾನ ನಡೆಸುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. 37 ಪ್ಯಾರ ಮಿಲಿಟರಿ ಸೆಕ್ಷನ್‌, 14 ಸೆಕ್ಟರ್‌ ಪೊಲೀಸ್‌ ಅಧಿಕಾರಿಗಳ ಸೆಕ್ಟರ್‌, 3 ಇನ್ಸ್‌ಪೆಕ್ಟರ್‌ಗಳ ಸೂಪರ್‌ವೈಸಿಂಗ್‌ ಇನ್ಸ್‌ಪೆಕ್ಟರ್‌, 2 ಕೆಎಸ್‌ಆರ್‌ಪಿ ಸೆಕ್ಷನ್‌ ಸೇರಿದಂತೆ ಸಿವಿಲ್‌ ಪೊಲೀಸ್‌ ಮತ್ತು ಎಎನ್‌ಎಫ್‌ ಒಳಗೊಂಡ ಒಟ್ಟು 367 ಮಂದಿ ಪೊಲೀಸರು ನಿಯೋಜನೆಗೊಂಡಿದ್ದಾರೆ. 3 ಚೆಕ್‌ ಪೋಸ್ಟ್‌ಗಳಲ್ಲಿ ಕಾರ್ಯಾಚರಣೆ ನಡೆಯಲಿದೆ.

ಮಸ್ಟರಿಂಗ್‌ ಸೆಂಟರ್‌
ಮಂಜುನಾಥ ಪೈ ಮೆಮೋರಿಯಲ್‌ ಪ್ರಥಮ ದರ್ಜೆ ಕಾಲೇಜು ಮಸ್ಟರಿಂಗ್‌ ಹಾಗೂ ಡಿ ಮಸ್ಟರಿಂಗ್‌ ಸೆಂಟರ್‌ ಆಗಿದ್ದು, ಮೇ 9 ರಂದು ಬೆಳಗ್ಗಿನಿಂದಲೇ ಮಸ್ಟರಿಂಗ್‌ ಕಾರ್ಯಗಳು ನಡೆಯುತ್ತಿದೆ.





























































































































error: Content is protected !!
Scroll to Top