ಮಸೀದಿಯಲ್ಲಿ ಹಿಂದೂ ವಿವಾಹ : ವಿಡಿಯೋ ಶೇರ್​ ಮಾಡಿದ ಎ. ಆರ್‌. ರೆಹಮಾನ್‌

ಕೇರಳ : ದಿ ಕೇರಳ ಸ್ಟೋರಿ ಸಿನೆಮಾಕ್ಕೆ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದು, ಪರೋಕ್ಷವಾಗಿ ಚಿತ್ರವನ್ನು ಪ್ರಶ್ನೆ ಮಾಡಿದ್ದಾರೆ. ಇದು ಕೇರಳದ ಮಸೀದಿಯೊಂದರಲ್ಲಿ ನಡೆದ ಹಿಂದೂ ವಿವಾಹದ ವಿಡಿಯೋ ಆಗಿದೆ. ಈ ಮದುವೆ ನಡೆದಿರುವುದು 2020 ರಲ್ಲಿ ಎನ್ನಲಾಗಿದೆ. ಕೇರಳದ ಮಸೀದಿಯೊಂದರಲ್ಲಿ ನಡೆದ ಹಿಂದೂ ಜೋಡಿಯ ವಿವಾಹ ಇದಾಗಿದೆ. ಅಂಜು ಮತ್ತು ಶರತ್ ಅವರ ವಿವಾಹ ಸಮಾರಂಭದಲ್ಲಿ ಹಿಂದೂ ಧಾರ್ಮಿಕ ವಿಧಿಗಳ ಪ್ರಕಾರ ನಡೆಸಲಾಗಿದೆ ಎಂದು ಪೋಸ್ಟ್​ನಲ್ಲಿ ತಿಳಿಸಲಾಗಿದೆ. ಅದರಲ್ಲಿಯೂ ಮಸೀದಿಯೊಳಗೆ ಹಿಂದೂ ಅರ್ಚಕರು ಇದನ್ನು ನಡೆಸಿಕೊಟ್ಟಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮದುವೆಯ ವೀಡಿಯೊವನ್ನು ಹಂಚಿಕೊಳ್ಳುವಾಗ ಟ್ವಿಟರ್ ಬಳಕೆದಾರರು ಇಲ್ಲಿ ಮತ್ತೊಂದು ಕೇರಳ ಕಥೆ ಎಂದು ಬರೆದಿದ್ದಾರೆ. ಮಾನವೀಯತೆಯ ಮೇಲಿನ ಪ್ರೀತಿ ಬೇಷರತ್ತಾಗಿ ಮತ್ತು ಗುಣಪಡಿಸುವಂತಿರಬೇಕು ಎಂದು ರೆಹಮಾನ್​ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಈ ಮದುವೆಯಾಗಲು ಕಾರಣವೇನು ಎಂಬುದನ್ನು ತಿಳಿಸಲಾಗಿದೆ. ಮದುವೆ ಮಾಡಲು ವಧುವಿನ ಮನೆಯಲ್ಲಿ ಹಣದ ಕೊರತೆಯಿತ್ತು. ಕುಟುಂಬದ ಮುಖ್ಯಸ್ಥರನ್ನು ಕಳೆದುಕೊಂಡ ಕುಟುಂಬಕ್ಕೆ ಸಂಪನ್ಮೂಲಗಳ ಕೊರತೆಯಿತ್ತು. ಆಗ ಆಕೆಯ ತಾಯಿ ಮಸೀದಿಯ ಸಮಿತಿಯನ್ನು ಸಂಪರ್ಕಿಸಿದ್ದರು. ಆಗ ಹಿಂದೂ ಪಾದ್ರಿಯೊಬ್ಬರು ಮಸೀದಿಯಲ್ಲಿ ವಿವಾಹ ನೆರವೇರಿಸಿದ್ದಾರೆ ಎನ್ನಲಾಗಿದೆ. ಆ ಸಮಯದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ಈ ವಿವಾಹವನ್ನು ಕೇರಳದ ಒಗ್ಗಟ್ಟಿನ ಉದಾಹರಣೆ ಎಂದು ಕರೆದಿದ್ದರು.







































































error: Content is protected !!
Scroll to Top