ಮೋದಿ ಬಂದ ಬಳಿಕ ಬದಲಾದ ಸಮೀಕ್ಷೆ ಲೆಕ್ಕಾಚಾರ

ಬಿಜೆಪಿಗೆ ಹೆಚ್ಚುಸ್ಥಾನ ಸಿಗುವ ನಿರೀಕ್ಷೆ

ಬೆಂಗಳೂರು: ವಿವಿಧ ಚಾನೆಲ್‌ಗಳು, ಸಂಸ್ಥೆಗಳು, ಸ್ವತಹ ರಾಜಕೀಯ ಪಕ್ಷಗಳು ಇಷ್ಟರವರೆಗೆ ನಡೆಸಿದ ಬಹುತೇಕ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದೇ ಹೇಳಲಾಗುತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಅಖಾಡಕ್ಕೆ ಇಳಿದ ಬಳಿಕ ಈ ಸಮೀಕ್ಷೆಗಳೆಲ್ಲಾ ಬದಲಾಗಿದೆ. ಈ ಸಂಬಂಧ ನ್ಯೂಸ್ 18 ಕನ್ನಡ ಮತ್ತು ಕನ್ವರ್ಜೆಂಟ್ ಸಂಸ್ಥೆಯ ಚುನಾವಣಾ ಪೂರ್ವ ಸಮೀಕ್ಷೆ ಮಾಹಿತಿಯನ್ನು ಹಂಚಿಕೊಂಡಿದೆ. ಈ ಸಂಸ್ಥೆಗಳು ಇತ್ತೀಚಿಗೆ ನಡೆಸಿದ ಸಮೀಕ್ಷೆ ಪ್ರಕಾರ ಬಿಜೆಪಿ 105, ಕಾಂಗ್ರೆಸ್ 87 ಹಾಗೂ ಜೆಡಿಎಸ್ 32 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಲಾಗಿದೆ.
ಈ ಅಂಕಿ ಅಂಶಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, ಟಿಕೆಟ್ ಹಂಚಿಕೆ, ಪ್ರಧಾನಿ ಮೋದಿ ಪ್ರಚಾರ ಆರಂಭಿಸಿದ ನಂತರ ನಡೆಸಲಾದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಬಿಜೆಪಿ 105 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದನ್ನು ತೋರಿಸಲಾಗಿದೆ. ಬಿಜೆಪಿ ಬಹುಮತ ಪಡೆಯಲು ಇನ್ನೂ 10 ಸ್ಥಾನಗಳ ಅಗತ್ಯವಿದೆ. ಪ್ರಚಾರ ಮುಗಿಯುವುದರೊಳಗೆ ಅಷ್ಟು ಸ್ಥಾನಗಳನ್ನು ಪಡೆಯುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.
ಜೀ ನ್ಯೂಸ್ ಸಮೀಕ್ಷೆಯಲ್ಲೂ ಬಿಜೆಪಿ 103-115, ಕಾಂಗ್ರೆಸ್ 79-91, ಜೆಡಿಎಸ್ 26-36 ಇತರರು 1-3 ಕ್ಷೇತ್ರ ಪಡೆಯುವುದಾಗಿ ಹೇಳಲಾಗಿದೆ.
ಕರ್ನಾಟಕದಲ್ಲಿ ಮೋದಿ ಒಂದು ಸುತ್ತಿನ ಪ್ರಚಾರ ಮಾತ್ರ ಮಾಡಿದ್ದಾರೆ. ಇನ್ನೂ ಒಂದು ಸುತ್ತಿನ ಪ್ರಚಾರಕ್ಕಾಗಿ ಮೇ 6ರಂದು ಬರಲಿದ್ದಾರೆ. ಆ ನ<ಂತರ ಎಲ್ಲ ಸಮೀಕ್ಷೆಗಲೂ ಬುಡಮೇಲಾಗಿ ಬಿಜೆಪಿ ಬಹುಮತ ಪಡೆದುಕೊಳ್ಳಲಿದೆ ಎಂಬ ವಿಶ್ವಾಸ ಬಿಜೆಪಿಯವರಲ್ಲಿದೆ.



















































































error: Content is protected !!
Scroll to Top