ಮೀಸಲಾತಿಯಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿಲ್ಲ : ಬೊಮ್ಮಾಯಿ ಸ್ಪಷ್ಟನೆ

ಸುಪ್ರೀಂ ಕೋರ್ಟ್‌ ವಿಚಾರಣೆ ತನಕ ನಿರ್ಧಾರ ಇಲ್ಲ

ಬೆಂಗಳೂರು: ಸುಪ್ರೀಂ ಕೋರ್ಟ್ ವಿಚಾರಣೆ ಪೂರ್ಣವಾಗುವವರೆಗೆ ಮುಸ್ಲಿಂ ಮೀಸಲಾತಿ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮುಸ್ಲಿಮರ ಮೀಸಲಾತಿ ಕುರಿತು ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ಪ್ರಕರಣದ ವಿಚಾರಣೆ ಪೂರ್ಣವಾಗುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯವು ಮೇ 9ಕ್ಕೆ ದಿನಾಂಕ ಮುಂದೂಡಿದ್ದು, ಕೋರ್ಟ್‌ನಿಂದ ಯಾವುದೇ ತಡೆಯಾಜ್ಞೆ ಸಿಕ್ಕಿಲ್ಲ ಎಂದರು.
ಮುಸ್ಲಿಮರಿಗೆ ವಿರುದ್ಧವಾಗಿ ಈ ಮೀಸಲಾತಿ ಹಂಚಿಕೆ ಇಲ್ಲ. ಈ ಬಗ್ಗೆ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಮುಸ್ಲಿಮರಲ್ಲಿ ಸುಮಾರು 17 ಉಪಜಾತಿಗಳಿವೆ. ಅವೆಲ್ಲವೂ ಹಿಂದುಳಿದ ವರ್ಗದಲ್ಲಿಯೇ ಇವೆ. ಇಲ್ಲಿಯೂ ಕಡಿಮೆ ಆದಾಯಕ್ಕೆ ಮೀಸಲಾತಿ ಸಿಗುತ್ತಿತ್ತು. ನಾವು ಈಗ ಮಾಡಿದ ಮೀಸಲಾತಿಯಲ್ಲಿಯೂ ಅದು ಸಿಗುತ್ತದೆ. ಹೀಗಾಗಿ ಅನ್ಯಾಯ ಆಗಿಲ್ಲ ಮತ್ತು ಮಾನದಂಡಗಳೂ ಬದಲಾಗಿಲ್ಲ. ಇದರಲ್ಲಿ ಅನ್ಯಾಯದ ಮಾತೇ ಇಲ್ಲ. ಸುಪ್ರೀಂ ಕೋರ್ಟ್ ವಿಚಾರಣೆ ಪೂರ್ಣಗೊಳ್ಳುವವರೆಗೆ ನಾವು ಅದನ್ನು ಮುಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ನಾವು ನಿರ್ಧರಿಸಿದ್ದೇವೆ ಅಂತೆಯೇ ನ್ಯಾಯಾಲಯವು ಯಾವುದೇ ತಡೆಯಾಜ್ಞೆ ನೀಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
10ರಷ್ಟು ಮೀಸಲಾತಿಗೆ ಅರ್ಹರಾಗಿರುವ ಆರ್ಥಿಕವಾಗಿ ದುರ್ಬಲ ವರ್ಗದಲ್ಲಿ ಮುಸ್ಲಿಮರನ್ನು ಇರಿಸಲಾಗಿದೆ. ನಾಲ್ಕು ಪರ್ಸೆಂಟ್ ಪಡೆಯುತ್ತಿದ್ದವರನ್ನು 10 ಪರ್ಸೆಂಟ್ ಕೆಟಗರಿಗೆ ಹಾಕಲಾಗಿದೆ. ಇದರಿಂದ ಯಾವುದೇ ಅನ್ಯಾಯ ಆಗಿಲ್ಲ ಎಂದರು.



















































error: Content is protected !!
Scroll to Top