ಕಾರ್ಕಳ : ಮುಡಾರು ಗ್ರಾಮದ 9 ಮಂದಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಸಚಿವ ವಿ. ಸುನಿಲ್ ಕುಮಾರ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಎಂ. ಸುರೇಶ್ ಕುಮಾರ್, ಪ್ರಮೀಳಾ ಶ್ರೀನಿವಾಸ್, ಕೊರಗ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಮೂಂಡಿ ಕೊರಗ, ಸದಸ್ಯ ಹೆಪೆಜಾರು ಅಶೋಕ್, ಕೊರಗಜ್ಜ ದೈವಸ್ಥಾನ ಸಮಿತಿ ಸದಸ್ಯೆ ಚಿಂದು ಕೊರಗ, ಸಮಾಜ ಸೇವಕಿ ಲೀಸಾ ಮಿರಾಂದ, ಪ್ರೇಮಾ ನಾಯಕ್ ನಡಾಯಿಪಲ್ಕೆ, ಕೊರಗ ಮುಖಂಡ ಬಾಬು ಕೊರಗ, ಪರಪ್ಪಾಡಿ ಶಾಲಾ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಸೀತಾರಾಮ ಆಚಾರ್ಯ ಮೊದಲಾದವರು ಪಕ್ಷ ಸೇರ್ಪಡೆಗೊಂಡರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್, ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಯ ಬಂಗೇರ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅಮೃತಾ ಪ್ರಭು, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಪ್ರಮುಖರಾದ ಸುರೇಶ್ ಮಡಿವಾಳ, ಸುರೇಶ್ ಸಾಲ್ಯಾನ್, ಅರುಣ್ ಶೆಟ್ಟಿ, ರಜತ್ ರಾಮ್ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.



































