ಸಚಿವ ಎಂಟಿಬಿ ರಾಜ್ಯದ ನಂಬರ್‌ ಒನ್‌ ಕೋಟಿ ಕುಬೇರ

ದ್ವಿತೀಯ ಸ್ಥಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌

ಬೆಂಗಳೂರು: ನಾಮಪತ್ರ ಸಲ್ಲಿಕೆ ಶುರುವಾಗುತ್ತಿದ್ದಂತೆ ಯಾವ ರಾಜಕಾರಣಿ ಎಷ್ಟು ಕೋಟಿಗಳ ಒಡೆಯ ಎಂಬ ಮಾಹಿತಿಯೂ ಬಹಿರಂಗವಾಗುತ್ತಿದೆ. ಇಷ್ಟರ ವರೆಗೆ ಲಭ್ಯವಾಗಿರುವ ಅಫಿಡವಿತ್‌ ಮಾಹಿತಿ ಪ್ರಕಾರ ರಾಜ್ಯದ ಕೋಟಿ ಕುಳಗಳಲ್ಲಿ ಸಚಿವ ಎನ್. ನಾಗರಾಜ್ ಅಲಿಯಾಸ್ ಎಂಟಿಬಿ ನಾಗರಾಜ್ ಅಗ್ರಸ್ಥಾನದಲ್ಲಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ದ್ವಿತೀಯ ಸ್ಥಾನದಲ್ಲಿದ್ದಾರೆ. ಎಂಟಿಬಿ ಬರೋಬ್ಬರಿ 1,609 ಕೋಟಿ ರೂ. ಸಂಪತ್ತಿನ ಒಡೆಯ ಎಂದು ಅವರ ಅಫಿಡವಿತ್‌ ತಿಳಿಸುತ್ತದೆ. ಮೂರು ವರ್ಷಗಳಲ್ಲಿ ಅವರ ಆಸ್ತಿ 400 ಕೋಟಿ ರೂ. ಏರಿಕೆಯಾಗಿದೆ. 2019ರ ಉಪಚುನಾವಣೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು 1,200 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು.
1,400 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶ್ರೀಮಂತ ರಾಜಕಾರಣಿಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮತ್ತು ರಿಯಲ್ ಎಸ್ಟೇಟ್ ಮತ್ತು ಗ್ರಾನೈಟ್ ವ್ಯವಹಾರಗಳನ್ನು ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಆಕಾಂಕ್ಷಿ 19 ಕ್ರಿಮಿನಲ್ ಪ್ರಕರಣಗಳನ್ನೂ ಎದುರಿಸುತ್ತಿದ್ದಾರೆ.
ಡಿಕೆ ಶಿವಕುಮಾರ್ ವಿರುದ್ಧ ಕನಕಪುರದಲ್ಲಿ ಕಣಕ್ಕಿಳಿದಿರುವ ಕಂದಾಯ ಸಚಿವ ಆರ್. ಅಶೋಕ ಅವರು 60 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ಚುನಾವಣಾ ಆಯೋಗದ ಮುಂದೆ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್‌ಗಳು ನಾಯಕರ ನಿವ್ವಳ ಆಸ್ತಿ ಮೌಲ್ಯವನ್ನು ಬಹಿರಂಗಪಡಿಸಿವೆ. 50 ಕೋಟಿಗೂ ಅಧಿಕ ಆಸ್ತಿ ಮೌಲ್ಯ ಹೊಂದಿರುವ ಹಲವಾರು ಅಭ್ಯರ್ಥಿಗಳಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಸಚಿವ ಮುನಿರತ್ನ ಅವರ ಆಸ್ತಿ 293 ಕೋಟಿ ರೂ., ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆಸ್ತಿ ಮೌಲ್ಯ 181 ಕೋಟಿ ರೂ., ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಆಸ್ತಿ 76 ಕೋಟಿ ರೂ. ಆಗಿದೆ. ಅವರು ಐದು ದುಬಾರಿ ಕಾರುಗಳನ್ನೂ ಹೊಂದಿದ್ದಾರೆ.

























































error: Content is protected !!
Scroll to Top