ಬಂಗಲೆ ಜತೆ ವಿಶೇಷ ಬಾಂಧವ್ಯ ಇಲ್ಲ ಎಂದ ಕಾಂಗ್ರೆಸ್ ನಾಯಕ
ಹೊಸದಿಲ್ಲಿ : ಮೋದಿ ಕುಲನಾಮವನ್ನು ಲೇವಡಿ ಮಾಡಿ 2 ವರ್ಷಗಳ ಜೈಲು ಶಿಕ್ಷೆಗೊಳಗಾಗಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ ಇದೀಗ ತನ್ನ ಸರಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ.
ದಿಲ್ಲಿಯ ಲುಟೆನ್ಸ್‌ನಲ್ಲಿರುವ ಸರಕಾರಿ ಬಂಗಲೆಯಿಂದ ನಿನ್ನೆ ಲಾರಿಗಳಲ್ಲಿ ಸಾಮಾನು ಸರಂಜಾಮು ಸಾಗಿಸುವ ಪ್ರಕ್ರಿಯೆ ಶುರುವಾಗಿದೆ.
ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಂಡ ಒಂದು ತಿಂಗಳಲ್ಲಿ ಸರಕಾರಿ ಬಂಗಲೆಯನ್ನು ಖಾಲಿ ಮಾಡಬೇಕು. ಅದಕ್ಕಾಗಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಏ.22 ರೊಳಗೆ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಲೋಕಸಭೆಯ ಕಾರ್ಯದರ್ಶಿ ರಾಹುಲ್ ಗಾಂಧಿಗೆ ಹೇಳಿದ್ದರು. ಇದಕ್ಕೂ ಮೊದಲೇ ರಾಹುಲ್ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ತುಘಲಕ್ ಲೇನ್ ಬಂಗಲೆಯನ್ನು ರಾಹುಲ್ ಗಾಂಧಿಯವರಿಗೆ 2005ರಲ್ಲಿ ಉತ್ತರ ಪ್ರದೇಶದ ಅಮೇಠಿಯಿಂದ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಅವರಿಗೆ ಮಂಜೂರು ಮಾಡಲಾಗಿತ್ತು. 2019ರ ಲೋಕಸಭಾ ಚುನಾವಣೆ ಪ್ರಚಾರ ಸಮಯದಲ್ಲಿ ಕೋಲಾರದಲ್ಲಿ ಎಲ್ಲ ಕಳ್ಳರು ಮೋದಿ ಉಪನಾಮಗಳನ್ನು ಹೊಂದಿದ್ದಾರೆ ಹೇಗೆ ಎಂದು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್‌ನ ಸ್ಥಳೀಯ ನ್ಯಾಯಾಲಯವು ಋಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿದೆ.
ರಾಹುಲ್ ಗಾಂಧಿಯವರು ನಿವಾಸ ಖಾಲಿ ಮಾಡುವ ಸಮಯದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ರಾಹುಲ್ ಗಾಂಧಿ ಯಾವಾಗಲೂ ಸರ್ಕಾರಿ ವಸತಿ ಗೃಹದಲ್ಲಿಯೇ ಇರುತ್ತಿದ್ದರಿಂದ ತನಗೆ ಎಂದಿಗೂ ಸ್ವಂತ ಮನೆ ಇರಲಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಮನೆಗೂ ತನಗೂ ಬಲವಾದ ಬಾಂಧವ್ಯ ಇಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಅವರು ತಮ್ಮ ನಿವಾಸದಿಂದ ಖಾಲಿ ಮಾಡುತ್ತಾರೆ ಎಂದಾಗ ಕಾಂಗ್ರೆಸ್ ಅನೇಕ ಸಂಸದರು ನಾನು ಸರ್ಕಾರಿ ಮನೆಯನ್ನು ಖಾಲಿ ಮಾಡುತ್ತೇವೆ ಎಂದು ‘ಮೇರಾ ಘರ್, ಆಪ್ಕಾ ಘರ್’ ಅಭಿಯಾನವನ್ನು ಪ್ರಾರಂಭಿಸಿದ್ದರು.





















