ಬಪ್ಪನಾಡು ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ಅವಕಾಶ ನಿರಾಕರಣೆ

ಧಾರ್ಮಿಕ ದತ್ತಿ ನಿಯಮದಂತೆ ದೇವಸ್ಥಾನದ ಆವರಣದಲ್ಲಿ ಇತರ ಮತೀಯರಿಗೆ ವ್ಯಾಪಾರ ಅವಕಾಶ ಇಲ್ಲ ಎಂಬ ಕಾರಣ

ಮೂಲ್ಕಿ : ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ನಿರಾಕರಿಸಲಾಗಿದೆ.
ಎ.5ರಂದು ಬಪ್ಪನಾಡು ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣ ನಡೆದು ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಈ ಮಧ್ಯೆ ಮಂಗಳವಾರ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಮುಸ್ಲಿಂ ವ್ಯಾಪಾರಿಗಳು ದೇವಸ್ಥಾನಕ್ಕೆ ತೆರಳಿದ್ದಾರೆ. ಆದರೆ, ಇಲ್ಲಿ ವ್ಯಾಪಾರ ನಡೆಸಲು ಅವಕಾಶವಿಲ್ಲ ಎಂದು ನಿರಾಕರಿಸಿ ವ್ಯಾಪಾರಿಗಳನ್ನು ಹಿಂದೆ ಕಳುಹಿಸಲಾಗಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ. ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಹಿಂದುತ್ವ ಸಂಘಟನೆಗೆ ಸೇರಿದವರೆನ್ನಲಾದ ಕೆಲವರು ದೇವಸ್ಥಾನದ ಆಡಳಿತ ಮೊಕ್ತೇಸರರು ಮತ್ತು ಆನುವಂಶಿಕ ಮೊಕ್ತೇಸರರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯಲ್ಲಿ ಹಿಂದೂ ಧಾರ್ಮಿಕ ದತ್ತಿ ನಿಯಮ 2002ರಂತೆ ದೇವಸ್ಥಾನದ ಆವರಣದಲ್ಲಿ ಇತರ ಮತೀಯರು ವ್ಯಾಪಾರ ಮಾಡುವಂತಿಲ್ಲ. ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಲಾಗಿತ್ತು. ಈ ಮನವಿಯನ್ನು ಮುಂದಿಟ್ಟುಕೊಂಡು ಬಪ್ಪನಾಡು ದೇವಸ್ಥಾನದ ಜಾತ್ರಾಮಹೊತ್ಸವದಲ್ಲಿ ಮುಸ್ಲಿಮರು ವ್ಯಾಪಾರ
ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎನ್ನಲಾಗಿದೆ.
800 ವರ್ಷಗಳಿಂದಲೂ ಇಲ್ಲಿ ಹೆಚ್ಚಾಗಿ ಮುಸ್ಲಿಂ ವ್ಯಾಪಾರಿಗಳು ದೇವರಿಗೆ ಪ್ರಿಯವಾದ ಮಲ್ಲಿಗೆ ಹೂವು ಮಾರಾಟದ ಮಳಿಗೆ, ಮಕ್ಕಳ ಆಟಿಕೆಗಳ ಮಳಿಗೆಗಳನ್ನು ಇಡುತ್ತಿದ್ದರು. 800 ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ, ಈಗ ಎರಡು ವರ್ಷಗಳಿಂದ ಮುಸ್ಲಿಂರಿಗೆ ವ್ಯಾಪಾರದ ನಿರಾಕರಿಸುತ್ತಿರುವ ಕುರಿತು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



































































































error: Content is protected !!
Scroll to Top