ಮಹಿಳಾ ವಿಭಾಗದಲ್ಲಿ ಐವರು 5 ಚಿನ್ನ ಗಳಿಕೆಯೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆ
ಕಾರ್ಕಳ : ಹಾಸನದಲ್ಲಿ ಇತ್ತೀಚೆಗೆ ನಡೆದ ಪುರುಷರ ಮತ್ತು ಮಹಿಳೆಯರ ಪಂಜ ಕುಸ್ತಿ (ಆರ್ಮ್ ರೆಸ್ಲಿಂಗ್) ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಕಾರ್ಕಳ ಫ್ರೆಂಡ್ಸ್ ಪವರ್ ಜಿಮ್ ತಂಡದ ಸುಜಿತ್ ನಾಯಕ್ ಬೈಲೂರು ಪುರುಷರ ಸೀನಿಯರ್ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರ ಅಂಗಸಂಸ್ಥೆ ಲೇಡೀಸ್ ಫಿಟ್ನೆಸ್ ಜಿಮ್‌ನ ತಕ್ಷಿಲ ಪಿ. ಕೋಟ್ಯಾನ್, ಮನ್ವಿತಾ ರಾವ್, ಅಕ್ಷತಾ ಜೆ. ಶೆಟ್ಟಿ, ಅನಿತಾ ರೊನಾಲ್ಡ್ 5 ಚಿನ್ನ, 2 ಬೆಳ್ಳಿ ಹಾಗೂ 3 ಕಂಚಿನ ಪದಕಗಳಿಸಿ ಮೇ ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂಜ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಮಹಮ್ಮದ್ ಆಲಿಯವರಿಂದ ಕುಸ್ತಿ ತರಬೇತಿಯನ್ನು ಪಡೆಯುತ್ತಿದ್ದಾರೆ. ವಿಜೇತರನ್ನು ಸಂಸ್ಥೆಯ ಸಹಮಾಲಕ ಯೋಗೀಶ್ ಸಾಲ್ಯಾನ್ ಅಭಿನಂದಿಸಿದ್ದಾರೆ.
























