ಕ್ರಿಕೆಟಿಗ ಪ್ರಥ್ವಿ ಶಾ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿದ ಸಪ್ನಾ ಗಿಲ್‌

ಮುಂಬಯಿಯ ಹೋಟೆಲಲ್ಲಿ ಕಿತ್ತಾಡಿಕೊಂಡ ಘಟನೆ

ಮುಂಬಯಿ : ಯೂ ಟ್ಯೂಬರ್‌ ಸಪ್ನಾ ಗಿಲ್ ಎಂಬಾಕೆ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ. ಐಪಿಸಿಯ ಸೆಕ್ಷನ್ 354, 509, 324ರ ಅಡಿಯಲ್ಲಿ ಕ್ರಿಕೆಟಿಗನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಪ್ನಾ ಗಿಲ್ ಪೃಥ್ವಿ ಶಾ ಮತ್ತು ಆಶೀಶ್​ ಯಾದವ್ ವಿರುದ್ಧ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೋರ್ಟ್ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಕಿರುಕುಳ ಮತ್ತು ಬ್ಯಾಟ್‌ನಿಂದ ಹೊಡೆದದ್ದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೃಥ್ವಿ ಶಾ ಮತ್ತು ಅವರ ಸ್ನೇಹಿತನ ವಿರುದ್ಧ ಸಪ್ನಾ ಗಿಲ್ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಈ ಪ್ರಕರಣಗಳನ್ನು ದಾಖಲಿಸಿಕೊಳ್ಳುವಾಗ ಸಪ್ನಾ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಪ್ರಮಾಣಪತ್ರವನ್ನೂ ನೀಡಿದ್ದು, ಅದರಲ್ಲಿ ಲೈಂಗಿಕ ಶೋಷಣೆಯ ಬಗ್ಗೆ ನಮೂದಿಸಲಾಗಿದೆ.
ಕೆಲವು ಸಮಯದ ಹಿಂದೆ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಸಪ್ನಾ ಗಿಲ್ ಮಧ್ಯೆ ಮುಂಬಯಿಯ ಪಂಚತಾರಾ ಹೋಟೆಲೊಂದರಲ್ಲಿ ಸೆಲ್ಫಿಗೆ ಫೋಸ್‌ ಕೊಡುವ ವಿಚಾರವಾಗಿ ಬೀದಿರಂಪವಾಗಿತ್ತು. ಬೀದಿಯಲ್ಲಿ ಅವರು ಕಿತ್ತಾಡಿಕೊಂಡಿದ್ದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಪೃಥ್ವಿ ಶಾ ಮತ್ತು ಆತನ ಸ್ನೇಹಿತ ತನಗೆ ಕಿರುಕುಳ ನೀಡಿರುವುದಾಗಿ ಸಪ್ನಾ ಗಿಲ್‌ ಆಗ ಆರೋಪಿಸಿದ್ದರು. ಈಗ ಈ ಎರಡೂ ಪ್ರಕರಣಗಳು ಏ.17 ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.
ಪೃಥ್ವಿ ಶಾ ಪ್ರಸ್ತುತ ಐಪಿಎಲ್ 16 ನೇ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಈ ವರ್ಷದ ಐಪಿಎಲ್ ಸೀಸನ್‌ನಲ್ಲಿ ಪೃಥ್ವಿ ಶಾ ಫಾರ್ಮ್ ಉತ್ತಮವಾಗಿಲ್ಲ. ಇದುವರೆಗೆ ಮೊದಲೆರಡು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿದ್ದರೂ ಒಂದು ಪಂದ್ಯದಲ್ಲೂ ವಿಶೇಷತೆ ತೋರಲು ಸಾಧ್ಯವಾಗಿಲ್ಲ.



















































































error: Content is protected !!
Scroll to Top