ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಶನಿವಾರ ಮತ್ತೊಮ್ಮೆ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಇದು ಚುನಾವಣೆ ಘೋಷಣೆಯಾಗುವುದಕ್ಕಿಂತ ಮುಂಚಿನ ಪ್ರಧಾನಿಯ ಕೊನೆಯ ಕರ್ನಾಟಕ ಭೇಟಿಯಾಗುವ ಸಾಧ್ಯತೆಯಿದೆ. ಯಾವುದೇ ಕ್ಷಣದಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಮಾಡಲು ಆಯೋಗ ಸಿದ್ಧವಾಗಿದೆ. ಬಹುತೇಕ ಸೋಮವಾರ ಚುನಾವಣಾ ಆಯೋಗ ಚುನಾವಣೆ ದಿನಾಂಕ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಶನಿವಾರ ಮೋದಿ ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಗಳಲ್ಲಿ ಅವರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ನಗರದಲ್ಲಿ ವೈಟ್‌ಫೀಲ್ಡ್-ಕೆ.ಆರ್. ಪುರ ನಡುವಿನ ನಮ್ಮ ಮೆಟ್ರೋ ನೇರಳೆ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದು ಈ ತಿಂಗಳಲ್ಲಿ ಮೋದಿಯ ಮೂರನೇ ಕರ್ನಾಟಕ ಭೇಟಿ. ಈ ಮೂಲಕ ಬಿಜೆಪಿ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಂಡಿದೆ.
ನಾಳೆ ಮೋದಿ ಕರ್ನಾಟಕಕ್ಕೆ : ಹಲವು ಯೋಜನೆಗಳ ಲೋಕಾರ್ಪಣೆ-ಜನಸಂಕಲ್ಪ ಯಾತ್ರೆ ಸಮಾರೋಪ

























