ಮಂಗಳೂರು ಜುವೆಲ್ಲರಿ ಅಂಗಡಿ ಸಿಬ್ಬಂದಿ ಕೊಲೆ ಆರೋಪಿ ಸೆರೆ

ಒಂದು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ

ಮಂಗಳೂರು : ಮಂಗಳೂರಿನಲ್ಲಿ ಒಂದು ತಿಂಗಳ ಹಿಂದೆ ಹಾಡಹಗಲೇ ಜ್ಯುವೆಲ್ಲರಿ ನೌಕರನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕಾಸರಗೋಡಿನಲ್ಲಿ ಸೆರೆಯಾಗಿದ್ದಾನೆ. ಕಾಸರಗೋಡು ಡಿವೈಎಸ್ಪಿ ಪಿ.ಕೆ. ಸುಧಾಕರನ್ ಹಾಗೂ ಅಪರಾಧ ಪತ್ತೆದಳದ ಡಿವೈಎಸ್ಪಿ ಅಬ್ದುಲ್ ರಹೀಮ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಕೋಜಿಕ್ಕೋಡ್ ಕೊಯಿಲಾಂಡಿ ತೂವಕ್ಕಾಡ್‌ನ ಶಿಫಾಜ್ ( 33) ಬಂಧಿತ ಆರೋಪಿ. ಈತ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದನು. ಈತನ ಸಿಸಿ ಟಿವಿ ದೃಶ್ಯಗಳನ್ನು ಮಂಗಳೂರು ಪೊಲೀಸರು ಕೇರಳ ಪೊಲೀಸರಿಗೆ ಹಸ್ತಾಂತರಿಸಿದ್ದರು. ಈ ಜಾಡನ್ನು ಹಿಡಿದು ತನಿಖೆ ನಡೆಸಿದ ಕಾಸರಗೋಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಫ.3 ರಂದು ಹಂಪನಕಟ್ಟೆಯ ಜುವೆಲ್ಲರಿಯೊಂದರಲ್ಲಿ ಸಿಬ್ಬಂದಿಯಾಗಿದ್ದ ರಾಘವೇಂದ್ರ ಆಚಾರ್ಯರವರನ್ನು ಹಾಡಹಗಲೇ ಚೂರಿಯಿಂದ ಇರಿದು ಕೊಲೆ ಮಾಡಿದ್ದನು. ಕೃತ್ಯಕ್ಕೆ ಕಾರಣ ಏನೆಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಆರೋಪಿಯನ್ನು ಮಂಗಳೂರು ಪೊಲೀಸರಿಗೆ ಹಸ್ತಾ೦ತರಿಸಲಾಗಿದೆ.
ಆರೋಪಿ ಪತ್ತೆಗೆ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ, ಮೊಬೈಲ್‌ ಟವರ್‌ನಲ್ಲಿ ದಾಖಲಾದ ಕರೆಗಳ ಮಾಹಿತಿ ವಿಶ್ಲೇಷಿಸಲು ಹಾಗೂ ವಿವಿಧ ಲಾಡ್ಜ್‌, ಹೋಟೆಲ್‌ಗಳನ್ನು ಪರಿಶೀಲಿಸಲು ತಂಡಗಳನ್ನು ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಕೇರಳ ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿತ್ತು. ಆರೋಪಿಯನ್ನು ಕಾಸರಗೋಡಿನಲ್ಲಿ ಮಾ.2ರಂದು ಪತ್ತೆಹಚ್ಚಲಾಗಿದೆ.



















































error: Content is protected !!
Scroll to Top