Thursday, December 1, 2022
spot_img
HomeUncategorizedಎನ್.ಎಸ್.ಎಸ್. ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿ – ಅನಿಲ್ ಕುಮಾರ್‌ ಜೈನ್‌

ಎನ್.ಎಸ್.ಎಸ್. ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿ – ಅನಿಲ್ ಕುಮಾರ್‌ ಜೈನ್‌

ಕಾರ್ಕಳ : ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆ, ಶಿಸ್ತು, ನಾಯಕತ್ವವನ್ನು ಬೆಳೆಸುವುದರ ಜೊತೆಗೆ ಸಹನೆ ಮೈಗೂಡಿಸುವುದು.‌ ಈ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವುದು ಎಂದು ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಕುಮಾರ್‌ ಜೈನ್‌ ಹೇಳಿದರು.
ಅವರು ಅ. 27ರಂದು ಕುಕ್ಕುಂದೂರಿನ ಶ್ರೀ ದುರ್ಗಾದೇವಿ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾ.ಸೇ.ಯೋ. ಘಟಕದಿಂದ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್ ಹೆಗ್ಡೆ ಶುಭ ಹಾರೈಸಿದರು. ಕುಕ್ಕುಂದೂರಿನ ಶ್ರೀ ದುರ್ಗಾದೇವಿ ಅನುದಾನಿತ ಹಿ.ಪ್ರಾ. ಶಾಲೆಯ ಶಾಲಾ ಸಂಚಾಲಕ ರಾಜೇಂದ್ರ ಬಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಕುಕ್ಕುಂದೂರಿನ ಶ್ರೀ ದುರ್ಗಾದೇವಿ ಅನುದಾನಿತ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಎನ್‌. ರಾಜ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಕಮಲಾಕ್ಷ ನಾಯಕ್, ಕುಕ್ಕುಂದೂರಿನ ಉದ್ಯಮಿ ತ್ರಿವಿಕ್ರಮ ಕಿಣಿ, ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು, ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ ಉಷಾ ರಾವ್‌ ಯು., ವಿದ್ಯಾರ್ಥಿ ನಾಯಕರಾದ ಪ್ರಸನ್ನ ಹಾಗೂ ಸ್ವಾತಿ, ಕುಕ್ಕುಂದೂರು ಫ್ರೆಂಡ್ಸ್ ಮುಂಬೈನ ಪ್ರಸನ್ನಕುಮಾರ್, ಜ್ಞಾನಸುಧಾ ಅಕಾಡೆಮಿಕ್‌ ಡೀನ್‌ ಡಾ. ಮಿಥುನ್‌ ಯು., ಶಾಲಾ ಹಿತೈಶಿ ವಿಠಲ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್‌ ಕುಲಾಲ್ ನಿರೂಪಿಸಿದರು. ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ರವಿ ಜಿ. ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!