ಇಂದು 5 ತಾಸು ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್‌

ನಿರ್ವಹಣೆ ಕಾಮಗಾರಿಗಾಗಿ ಬೆಳಗ್ಗೆ 11ರಿಂದ ವಿಮಾನ ಹಾರಾಟ ಸ್ಥಗಿತ

ಮುಂಬಯಿ: ರನ್‌ವೇ ನಿರ್ವಹಣೆ ಕೆಲಸಕ್ಕಾಗಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಂದು ಆರು ತಾಸು ಮುಚ್ಚಲಾಗುವುದು. ಈ ಅವಧಿಯಲ್ಲಿ ಕಾಲ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ. ವಿಮಾನಗಳ ಸಮಯವನ್ನು ಬದಲಾವಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಲೀಸಿದ್ದಾರೆ.

ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎರಡು ಪ್ರಮುಖ ರನ್‌ವೇಗಳನ್ನು ಹೊಂದಿದೆ. ಮುಖ್ಯ ರನ್‌ವೇ 9/27 ಮತ್ತು ಸೆಕೆಂಡರಿ ರನ್‌ವೇ 14/32, ಇದು ದಿನಕ್ಕೆ ಸುಮಾರು 800 ವಿಮಾನಗಳನ್ನು ನಿರ್ವಹಿಸುತ್ತದೆ. ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಎರಡನೇ ಅತ್ಯಂತ ಜನನಿಬಿಡ ಏರೋಡ್ರೋಮ್ ಆಗಿದೆ.
ಎರಡೂ ರನ್‌ವೇಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಅ.18 ರಂದು ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ರನ್‌ವೇ ಮುಚ್ಚಲಾಗುವುದು ಎಂದು ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್ ತಿಳಿಸಿದೆ. ಮುಂಬಯಿ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಅದಾನಿ ಗ್ರೂಪ್ ಶೇ.74 ಪಾಲು ಹೊಂದಿದೆ.













































































































































































error: Content is protected !!
Scroll to Top