ಇ-ಸ್ಟ್ಯಾಪಿಂಗ್‌ ಸೇವೆಯ ಉದ್ಘಾಟನೆ ಮತ್ತು ಮುದ್ರಾಂಕ ಹಾಗೂ ನೋಂದಣಿ ಕಾನೂನಿನ ಮಾಹಿತಿ

ಕಾರ್ಕಳ: ವಕೀಲರ ಸಂಘ ಮತ್ತು ಆಶಯ ಸೌಹರ್ದ ಸಹಕಾರ ಸಂಘದ ಸಹಭಾಗಿತ್ವದಲ್ಲಿ ಇ- ಸ್ಟ್ಯಾಪಿಂಗ್‌ ಸೇವೆಯ ಉದ್ಘಾಟನೆ ಮತ್ತು ಮುದ್ರಾಂಕ ಹಾಗೂ ನೋಂದಣಿ ಕಾನೂನಿನ ಬಗ್ಗೆ ಮಾಹಿತಿ ಕಾರ್ಯಕ್ರಮ ಅ.18ರ ಸಂಜೆ ಗಂಟೆ 4:30ಕ್ಕೆ ಕಾರ್ಕಳದ ಪುರಸಭಾ ಕಚೇರಿಯ ಮುಂಭಾಗದಲ್ಲಿರುವ ಆಶಯ ಸೌಹರ್ದ ಸಹಕಾರ ಸಂಘದಲ್ಲಿ ನಡೆಯಲಿದೆ.

ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನೀಲ್‌ ಕುಮಾರ್‌ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿರುವರು, ಆಶಯ ಸೌಹರ್ದ ಸಹಕಾರ ಸಂಘದ ಅಧ್ಯಕ್ಷ ಎಮ್.ಕೆ. ಸುವೃತ್‌ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಜಿ. ಮುರಲೀಧರ ಭಟ್‌ ಭಾಗಿಯಾಗಲಿರುವರು, ವಕೀಲರ ಸಂಘದ ಕಾರ್ಯದರ್ಶಿ ಪದ್ಮರಾಜ್‌ ಜೈನ್‌ ಮತ್ತು ಕಾರ್ಕಳ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಕೆ.ಪಿ. ಶ್ರೀಕಾಂತ್‌ ರಾವ್‌ ಉಪಸ್ಥಿತರಿರುವವರು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.



































































































































































error: Content is protected !!
Scroll to Top