ಆಪ್‌ ತೊರೆಯಲು ಒತ್ತಡ : ಸಿಬಿಐ ಮೇಲೆ ಸಿಸೋಡಿಯ ಆರೋಪ

ಅಬಕಾರಿ ನೀತಿಗೆ ಸಂಬಂಧಿಸಿ 9 ತಾಸು ಸತತ ವಿಚಾರಣೆ

ಹೊಸದಿಲ್ಲಿ: ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸೋಮವಾರ ಸಿಬಿಐ ದಿಲ್ಲಿ ಸರಕಾರದ ಅಬಕಾರಿ ನೀತಿ, ಉದ್ಯಮಿ ವಿಜಯ್ ನಾಯರ್ ಸೇರಿದಂತೆ ಇತರ ಆರೋಪಿಗಳೊಂದಿಗಿನ ಸಂಬಂಧಗಳು ಮತ್ತು ಪ್ರಕರಣದ ಶೋಧದ ವೇಳೆ ಪತ್ತೆಯಾದ ದಾಖಲೆಗಳ ವಿವಿಧ ಅಂಶಗಳ ಮೇಲೆ ಒಂಬತ್ತು ತಾಸು ವಿಚಾರಣೆ ನಡೆಸಿದೆ.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮನೀಶ್ ಸಿಸೋಡಿಯಾ, ಅಬಕಾರಿ ನೀತಿ ಪ್ರಕರಣಕ್ಕೆ ಯಾವುದೇ ಸಮಸ್ಯೆ ಇಲ್ಲದಿರುವುದನ್ನು ಸಿಬಿಐ ಕಚೇರಿಯಲ್ಲಿ ನೋಡಿದ್ದೇನೆ. ಇಡೀ ಕೇಸ್ ನಕಲಿಯಾಗಿದೆ. ನನ್ನ ವಿರುದ್ದ ಯಾವುದೇ ಹಗರಣ ಇಲ್ಲದಿರುವುದು 9 ಗಂಟೆಗಳ ವಿಚಾರಣೆಯಿಂದ ಅರ್ಥವಾಯಿತು. ಆದರೆ, ಇದು ದಿಲ್ಲಿಯಲ್ಲಿ ಆಪರೇಷನ್ ಕಮಲ ಯಶಸ್ವಿಗೊಳಿಸುವ ಪ್ರಯತ್ನವಾಗಿದೆ. ಆಪ್‌ ತೊರೆಯುವಂತೆ ನನ್ನ ಮೇಲೆ ಸಿಬಿಐ ಒತ್ತಡ ಹಾಕಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಎಎಪಿಯಿಂದ ಹೊರ ಹೋಗು, ಇಲ್ಲವಾದರೆ ನನ್ನ ವಿರುದ್ಧ ಕೇಸ್ ದಾಖಲಿಸುವುದಾಗಿ ಸಿಬಿಐ ಕಚೇರಿಯಲ್ಲಿ ಹೇಳಲಾಯಿತು. ಆದರೆ ಬಿಜೆಪಿಗಾಗಿ ಎಎಪಿ ತೊರೆಯುವುದಿಲ್ಲ ಎಂದು ಹೇಳಿದೆ. ನನ್ನನ್ನು ಸಿಎಂ ಮಾಡುವುದಾಗಿ ಅವರು ಹೇಳಿದರು ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಸೋಮವಾರ ಬೆಳಗ್ಗೆ 11.10ರಿಂದ ರಾತ್ರಿ ತನಕ ಸಿಸೋಡಿಯ ವಿಚಾರಣೆ ನಡೆದಿದೆ.



















































































error: Content is protected !!
Scroll to Top