ಸಾಲ ತೀರಿಸದ ಯುವಕನನ್ನು ಬೈಕ್‌ಗೆ ಕಟ್ಟಿ 2 ಕಿ.ಮೀ. ಎಳೆದೊಯ್ದ ಪಾತಕಿಗಳು

ವಾಹನ ದಟ್ಟಣೆಯ ರಸ್ತೆಯಲ್ಲಿ ಕೃತ್ಯ ನಡೆದರೂ ಯಾರೂ ತಡೆಯಲಿಲ್ಲ

ಕಟಕ್: ಒಡಿಶಾದ ಕಟಕ್‌ನಲ್ಲಿ ಕೊಟ್ಟ ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಯುವಕನನ್ನು ಬೈಕ್‌ಎಗ ಕಟ್ಟಿ 2 ಕಿ.ಮೀ. ಎಳೆದೊಯ್ದ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಯುವಕನನ್ನು ಬೈಕ್‌ಗೆ ಕಟ್ಟಿ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಎಳೆದೊಯ್ಯಲಾಗಿದೆ. ಯುವಕನನ್ನು ಕಟ್ಟಿ ಹಾಕಿ ಎಳೆದೊಯ್ಯುತ್ತಿರುವ ವೀಡಿಯೊ ವೈರಲ್ ಆಗಿದೆ.
ಕೆಲವರು ಈ ಕೃತ್ಯವನ್ನು ತಡೆಯಲು ಯತ್ನಿಸಿದರೂ ದುಷ್ಕರ್ಮಿಗಳು ಬೆದರಿರಿಸಿ ಅವರನ್ನು ಓಡಿಸಿದ್ದಾರೆ. ಅಚ್ಚರಿಯೆಂದರೆ ನಡು ರಸ್ತೆಯಲ್ಲಿ ಈ ಅಮಾನುಷ ಕೃತ್ಯ ನಡೆದಿದ್ದರೂ 2 ಕಿ.ಮೀ. ಉದ್ದಕ್ಕೂ ಒಬ್ಬನೇ ಒಬ್ಬ ಪೊಲೀಸ್‌ ಇರಲಿಲ್ಲ. . ಯುವಕನನ್ನು ಎಳೆದೊಯ್ದ ಮಾರ್ಗದಲ್ಲಿ ಮೂರು ಟ್ರಾಫಿಕ್ ಪೋಸ್ಟ್‌ಗಳಿದ್ದು ಅಲ್ಲಿ ಯಾರೂ ಇರಲಿಲ್ಲ. ಈ ಘಟನೆ ಪೊಲೀಸರ ಕಾರ್ಯದಕ್ಷತೆ ಬಗ್ಗೆ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ. ಅಚ್ಚರಿಯೆಂದರೆ ಯಾವುದೇ ಪೊಲೀಸ್ ಗಸ್ತು ತಂಡ ಅಥವಾ ಸ್ಥಳೀಯ ಪೊಲೀಸರೂ ಈ ಕೃತ್ಯವನ್ನು ತಡೆಯಲು ಮುಂದಾಗಿಲ್ಲ. ಮಾನವ ಹಕ್ಕುಗಳ ಕಾರ್ಯಕರ್ತರು ಈ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಡಿಸಿಪಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ, ಸಿಸಿಟಿವಿ ಕ್ಯಾಮರಾಗಳು, ನಿಯಂತ್ರಣ ಕೊಠಡಿಯ ಮೂಲಕ ನಗರದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಿರುವುದಾಗಿ ಹೇಳುತ್ತಾರೆ. ಆದರೆ ಪೊಲೀಸ್ ನಿಯಂತ್ರಣ ಕೊಠಡಿಯಾಗಲೀ, ಟ್ರಾಫಿಕ್ ಸಿಬ್ಬಂದಿಗಳಾಗಲೀ ತಡೆಯಲಿಲ್ಲ ಎಂದು ಆರೋಪಿಸಿದ್ದಾರೆ.

Latest Articles

error: Content is protected !!