ಕಾರ್ಕಳ : ದುರ್ಗಾ ದೌಡ್‌ ಪೂರ್ವಭಾವಿ ಸಭೆ

ದುರ್ಗಾ ದೌಡ್ ಧರ್ಮಜಾಗೃತಿಯ ಸಂಕೇತ – ಸುನೀಲ್‌ ಕುಮಾರ್

ಧರ್ಮದ ಸಂರಕ್ಷಣೆಗೆ ಪ್ರತಿ ಮನೆಯಲ್ಲಿ ಸಂಕಲ್ಪ – ಪ್ರಕಾಶ್ ಕುಕ್ಕೆಹಳ್ಳಿ

ಕಾರ್ಕಳ: ಗಾಂಧಿ ಮೈದಾನದ ಬಳಿ ಇರುವ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಸೆ.25 ರಂದು ಬೆಳಿಗ್ಗೆ ಸಮಯ 10.30ಕ್ಕೆ ಅ.2 ರಂದು ಜರುಗುವ ದುರ್ಗಾ ದೌಡ್‌ ಸಂಘಪರಿವಾರ ಮತ್ತು ಸಂಘಟನೆಗಳ ಪ್ರಮುಖರ ಪೂರ್ವಭಾವಿ ಸಭೆಯು ಜರುಗಿತು. ಭಾರತದಲ್ಲಿ ಪ್ರಸ್ತುತ ಜರುಗುತ್ತಿರುವ ವಾತವರಣವನ್ನು ಗಮನಿಸಿದಾಗ ದೇಶದಲ್ಲಿ ಹಿಂದೂ ಸಮಾಜವು ಒಗ್ಗಟ್ಟಿನೊಂದಿಗೆ ಮತ್ತು ಜಾಗೃತಿಯ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ಅಗತ್ಯವಾಗಿದೆ. ದೇಶದೊಳಗೆ ಅನ್ಯಮತೀಯ ಸಂಘಟನೆಗಳು ವಿದ್ವಂಸ ಕೃತ್ಯದಲ್ಲಿ ತೊಡಗಿಕೊಂಡಿದ್ದು, ತನಿಖೆಯಿಂದ ಒಂದೊಂದೆ ದೇಶದ್ರೋಹಿ ವಿಚಾರಗಳು ಬಯಲಾಗುತ್ತಿದೆ. ಆದುದರಿಂದ ಇಂಥ ಸಂದರ್ಭದಲ್ಲಿ ಹಿಂದು ಸಮಾಜ ಸಂಘಟನೆಗಳು ಮತ್ತು ಸಂಘ ಪರಿವಾರಗಳು ಅ.2 ರಂದು ನಡೆಸುತ್ತಿರುವ ದುರ್ಗಾ ದೌಡ್ ಧರ್ಮಜಾಗೃತಿಯ ಸಂಕೇತವಾಗಿದೆ ಎಂದು ಸಚಿವ ವಿ. ಸುನೀಲ್‌ ಕುಮಾರ್ ತಿಳಿಸಿದರು.
ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖ್ ಪ್ರಕಾಶ್ ಕುಕ್ಕೆಹಳ್ಳಿ ಮಾತನಾಡಿ, ನವರಾತ್ರಿ ದುರ್ಗೆಯ ಆರಾಧನೆಯ ಪರ್ವಕಾಲದಲ್ಲಿ, ದುರ್ಗೆ ಶಕ್ತಿಯ ಸಂಕೇತ, ಧರ್ಮದ ಸಂರಕ್ಷಣೆಗೆ ಪ್ರತಿ ಮನೆಯಲ್ಲಿ ಸಂಕಲ್ಪವಾಗಬೇಕು. ಈ ಕಾರಣಕ್ಕಾಗಿ ದುರ್ಗಾ ದೌಡ್ ನಡೆಯುತ್ತಿದೆ. ಮುಂದಿನ ಪೀಳಿಗೆಯ ಸುರಕ್ಷತೆಗಾಗಿ ಗಟ್ಟಿ ಅಡಿಪಾಯ ಹಾಕಬೇಕಿದೆ ಎಂದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು. ಹಿಂದು ಜಾಗರಣಾ ವೇದಿಕೆಯ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ ಸ್ವಾಗತಿಸಿ, ಜಿಲ್ಲಾ ಪ್ರಮುಖ್ ರಮೇಶ್ ಕಲ್ಲೊಟ್ಟೆ ನಿರೂಪಿಸಿದರು.



































































































error: Content is protected !!
Scroll to Top