ಸೆ. 26- ಅ. 5 : ಶ್ರೀ ಕ್ಷೇತ್ರ ಬೆಳ್ಮಣ್‌ನಲ್ಲಿ ನವರಾತ್ರಿ ಉತ್ಸವ

ಕಾರ್ಕಳ : ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆ. 26ರಿಂದ ಅ. 5ರವರೆಗೆ ನವರಾತ್ರಿ ಉತ್ಸವ ಹಾಗೂ ಅ. 6ರಂದು ವಿಜಯ ದಶಮಿ ಜರಗಲಿದೆ. ಆ ಪ್ರಯುಕ್ತ ಪ್ರತಿದಿನ ಸಂಜೆ ಗಂಟೆ 6ರಿಂದ ರಾತ್ರಿ 8-30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

ಸೆ. 26ರ ಸೋಮವಾರ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮತ್ತು ಶ್ರೀ ವಿಠೋಬಾ ರುಕ್ಮಾಯಿ ಭಜನಾ ಮಂಡಳಿ ಬೆಳ್ಮಣ್ಣು ಇವರಿಂದ ಹರಿ ಸಂಕೀರ್ತನೆ.
ಸೆ. 27ರ ಮಂಗಳವಾರ ಶ್ರೀ ಮಯೂರವಾಹನ ಯಕ್ಷಗಾನ ನಾಟಕ ಸಭಾ ಸೂಡ ಇದರ ಖ್ಯಾತ ಕಲಾವಿದರ ಸಮ್ಮಿಲನದೊಂದಿಗೆ ಸೂಡ ಹರೀಶ್ ಶೆಟ್ಟಿ ನಿರ್ದೇಶನದಲ್ಲಿ ತೆಂಕುತೆಟ್ಟಿನ ಯಕ್ಷಗಾನ ಅಂಜನಾ ನಂದನ ಪ್ರದರ್ಶನಗೊಳ್ಳಲಿದೆ.
ಸೆ. 28ರ ಬುಧವಾರ ಶ್ರೀ ದುರ್ಗಾಪರಮೇಶ್ವರಿ ಶೋಬಾನೆ ಬಳಗ ಮತ್ತು ಕಲಾಸಕ್ತರಿಂದ ವೈಷ್ಣವಿ ಭಟ್ ಅವರ ಸಂಯೋಜನೆಯಲ್ಲಿ ತಾಳ ಮದ್ದಳೆ – ಪಂಚವಟಿ
ಸೆ. 29ರ ಗುರುವಾರ ಯಕ್ಷಗಾನ ವೈಭವ, ಶ್ರೀ ರವೀಂದ್ರ ರಾವ್ ಚೆನೈ ಸಾರಥ್ಯದಲ್ಲಿ ಶ್ರೀಮತಿ ಶಾಲಿನಿ ಹೆಬ್ಬಾರ್‌ ಅವರ ಮಧುರ ಗಾನಸಿರಿಯೊಂದಿಗೆ ವೈಶಿಷ್ಠ್ಯ ಕಾರ್ಯಕ್ರಮ.
ಸೆ. 30ರ ಶುಕ್ರವಾರ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಭಜನಾ ಮಂಡಳಿಯ ಸದಸ್ಯರಿಂದ‌ ಕುಣಿತ ಭಜನೆ.
ಅ. 1ರ ಶನಿವಾರ ಶ್ರೀ ನೃತ್ಯಾಲಯ ಕಾರ್ಕಳ ಇವರಿಂದ ನೃತ್ಯಾಪರ್ಣಂ.
ಅ. 2ರ ಆದಿತ್ಯವಾರ ಸಾರ್ವಜನಿಕ ಕರೋಕೆ ಗಾಯನ ಸ್ಪರ್ಧೆ ಜರುಗಲಿದೆ. ವಿಶೇಷ ಪ್ರಶಸ್ತಿ ಮತ್ತು ನಗದು ಬಹುಮಾನ ಒಳಗೊಂಡಿದ್ದು ವಯಸ್ಸಿನ ನಿರ್ಬಂಧವಿರುವುದಿಲ್ಲ. ಆಸಕ್ತರು ಸೆ. 30ರ ಒಳಗಾಗಿ ದೇವಾಲಯದ ಕಚೇರಿಯಲ್ಲಿ ಅಥವಾ ಮೊ. 7259789716, 9902171267, 9448474731 ಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದು.
ಅ. 3ರ ಸೋಮವಾರ ಯಕ್ಷಗಾನ ತಾಳಮದ್ದಳೆ-“ನಚಿಕೇತ ಉಪಾಖ್ಯಾನ” .
ಅ. 4ರ ಮಂಗಳವಾರ ಪಡುಬಿದ್ರಿ – ಮಧ್ವನಗರ ತರಂಗಿಣಿ ಮಿತ್ರ ಮಂಡಳಿಯವರಿಂದ “ಕುಣಿತ ಭಜನಾ ಕಾರ್ಯಕ್ರಮ” ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ಜರಗಲಿದೆ.

ಭಕ್ತಿ ಸಂಗೀತ
ಅ. 5ರ ಬುಧವಾರ ವಿಜಯ ದಶಮಿ ಪ್ರಯುಕ್ತ ಬೆಳಿಗ್ಗೆ ಗಂಟೆ 11ರಿಂದ ಬೋಳ ನಮಿತಾ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ನಂತರ ಅನ್ನಸಂತರ್ಪಣೆ ಜರಗಲಿದೆ.

ಪ್ರತಿಭಾ ಪುರಸ್ಕಾರ
ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.95 ಕ್ಕೂ ಅಧಿಕ ಅಂಕ ಗಳಿಸಿದ ಬೆಳ್ಮಣ್ಣು ಗ್ರಾಮದ ಶಾಲಾ ಕಾಲೇಜು ಮತ್ತು ಪರವೂರಿನಲ್ಲಿರುವ ಬೆಳ್ಮಣ್ಣು ಪರಿಸರದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಅರ್ಹ ವಿದ್ಯಾರ್ಥಿಗಳು ದೇವಾಲಯದ ಕಚೇರಿಗೆ ಸೆ. 26ರ ಮೊದಲು ಅಂಕಪಟ್ಟಿಯ ಜೆರಾಕ್ಸ್ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೀಡಬೇಕಾಗಿ ವಿನಂತಿ.

ನವರಾತ್ರಿ ಉತ್ಸವದಂದು ಪ್ರತಿದಿನ ರಾತ್ರಿ ನವರಾತ್ರಿ ಪೂಜೆ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದೆ ಎಂದು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



































































































error: Content is protected !!
Scroll to Top