ಚಿಕ್ಕಬಳ್ಳಾಪುರದಲ್ಲಿ ನೂರಾರು ಹೆಕ್ಟೇರ್ ದ್ರಾಕ್ಷಿ, ಹೂ, ರೇಷ್ಮೆ, ತರಕಾರಿ ಬೆಳೆಗಳು ಜಲಾವೃತ – ರೈತನಿಗೆ ಕಣ್ಣೀರು

ಚಿಕ್ಕಬಳ್ಳಾಪುರ : ಮಳೆ ಬರುವುದಕ್ಕೂ ಮುನ್ನವೆ ಸಣ್ಣ ನಿರಾವರಿ ಹಾಗೂ ಎಚ್.ಎನ್.ವ್ಯಾಲಿ ಯೋಜನೆಯ ಇಂಜಿನಿಯರ್ ತಮ್ಮ ಜವಾಬ್ದಾರಿ, ಕರ್ತವ್ಯ ಪ್ರಜ್ಞೆ ತೋರಿಸಿದ್ದರೆ ಇಂದು ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ರೈತರ ಬೆಳೆಗಳು ಜಲಾವೃತ ಆಗ್ತಿರಲಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಧಾರಾಕರ ಮಳೆಯಿಂದ 791 ಹೆಕ್ಟರ್ ತೋಟಗಾರಿಕೆ ಬೆಳೆಗಳು ಹಾಗೂ 100 ಹೆಕ್ಟರ್ ನಷ್ಟು ಕೃಷಿ ಬೆಳೆಗಳು ಹಾನಿಯಾಗಿದೆ. ಮತ್ತೊಂದು ಕಡೆ ಕೆರೆಯೊಂದು ತುಂಬಿ ಹರಿಯುತ್ತಿರುವ ಕಾರಣ ನೂರಾರು ಎಕರೆ ತೋಟಗಾರಿಕೆ ಬೆಳೆಗಳು, ರಾತ್ರಿ ಕಳೆದು ಬೆಳಗಾಗುವುದರಲ್ಲಿ ಜಲಾವೃತವಾಗಿವೆ.
ಬಂಗಾರದ ಬೆಲೆಯ ಮಧ್ಯೆಯೂ ಕ್ಯಾರೆಟ್, ಬೀಟ್ ರೂಟ್, ಹೂಕೋಸು, ಸೇವಂತಿ, ಗುಲಾಬಿ ಸೇರಿದಂತೆ ರೇಷ್ಮೆ ದ್ರಾಕ್ಷಿ ಬೆಳೆಗಳು ನೀರಿನಲ್ಲಿ ಜಲಾವೃತವಾಗಿ ಬೆಳೆ ಬೆಳೆದ ರೈತನಲ್ಲಿ ಕಣ್ಣೀರು ತರಿಸಿದೆ. ನಾಲ್ಕೈದು ದಿನಗಳಿಂದ ಸುರಿದ ಧಾರಾಕರ ಮಳೆಗೆ ಚಿಕ್ಕಬಳ್ಳಾಪುರದ ಕಂದವಾರ ಕೆರೆ, ಮಂಚನಬಲೆ ಕೆರೆ, ರಂಗಧಾಮ ಕೆರೆಗಳು ಕೋಡಿ ಹರಿದು ಅಮಾನಿ ಗೋಪಾಲಕೃಷ್ಣ ಕೆರೆಯ ಒಳ ಹರಿವು ಹೆಚ್ಚಳವಾಗಿದೆ. ಇದರಿಂದ ಅಮಾನಿ ಗೋಪಾಲಕೃಷ್ಣ ಕೆರೆಯ ಜೋಡಿ ಕೋಡಿಗಳು ಹರಿಯುತ್ತಿವೆ.



















































error: Content is protected !!
Scroll to Top