ಬೈಲೂರು : ಸಾರ್ವಜನಿಕ ಗಣೇಶೋತ್ಸವ ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಪಿ. ಕಿಶನ್ ಹೆಗ್ಡೆ ಆಯ್ಕೆ

ಬೈಲೂರು : ಶ್ರೀ ರಾಮಮಂದಿರ ಸಾರ್ವಜನಿಕ ಗಣೇಶೋತ್ಸವ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಪಂಚಮೇಳಗಳ ಯಜಮಾನ ಪಿ. ಕಿಶನ್ ಹೆಗ್ಡೆ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ. ಗೌರವ ಅಧ್ಯಕ್ಷರಾಗಿ ಓಂಕಾರ್ ನಾಯಕ್ ಮತ್ತು ಕಮಲಾಕ್ಷ ನಾಯಕ್, ಉಪಾಧ್ಯಕ್ಷ ಧರ್ಮರಾಜ್ ಕುಮಾರ್, ಕಾರ್ಯದರ್ಶಿ ಉದಯ ಕುಮಾರ್ ಹೆಗ್ಡೆ ಯರ್ಲಪಾಡಿ, ಜತೆ ಕಾರ್ಯದರ್ಶಿ ಕೆ. ಸತೀಶ್ ರಾವ್ ಕರ್ವಾಲು, ಕೋಶಾಧಿಕಾರಿ ಬಿ. ರಮೇಶ್ ಕಿಣಿ ಬೈಲೂರು, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಕಾಂತರಗೋಳಿ, ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಕುಮಾರ್, ಸಂಘಟನಾ ಕಾರ್ಯದರ್ಶಿ ಭಾನುದಾಸ್ ನಾಯಕ್ ಬೈಲೂರು ಆಯ್ಕೆಯಾಗಿರುತ್ತಾರೆ. ರಜತಮಹೋತ್ಸವದ ಅಂಗವಾಗಿ ಗಣೇಶೋತ್ಸವವು ಐದು ದಿನಗಳ‌ ಪರ್ಯಂತ ನಡೆಯಲಿದ್ದು ಈ ವರ್ಷ ಭಗವದ್ಭಕ್ತರ ನೆರವಿನೊಂದಿಗೆ ಗಣಪತಿ ದೇವರಿಗೆ ಬೆಳ್ಳಿಯ ಪ್ರಭಾವಳಿಯನ್ನು ಸಮರ್ಪಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



































































































error: Content is protected !!
Scroll to Top