ಹೊಸ ರಾಷ್ಟ್ರಪತಿ ಇಂದು ಘೋಷಣೆ

*5ನೇ ರಾಷ್ಟ್ರಪತಿ ಆಯಕೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ
ಹೊಸದಿಲ್ಲಿ: ದೇಶದ ಹೊಸ ರಾಷ್ಟ್ರಪತಿ ಘೋಷಣೆಯಾಗುವ ಪರ್ವ ದಿನ ಇಂದು. 15ನೇ ರಾಷ್ಟ್ರಪತಿ ಯಾರೆಂದು ತಿಳಿಯುವ ಮತ ಎಣಿಕೆ ಇಂದು ಬೆಳಗ್ಗೆ 11 ಗಂಟೆಗೆ ಸಂಸತ್‌ ಭವನದ 63ನೇ ಕೊಠಡಿಯಲ್ಲಿ ಶುರುವಾಗಲಿದೆ. ಜು.18ರಂದು ರಾಷ್ಟ್ರಪತಿ ಚುನಾವಣೆ ನಡೆದಿತ್ತು.
ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಾಜಿ ರಾಜ್ಯಪಾಲೆ ಹಾಗೂ ಓಡಿಶಾದ ಬುಡಕಟ್ಟು ಜನಾಂಗದ ನಾಯಕಿ ದ್ರೌಪದಿ ಮುರ್ಮು ಹಾಗೂ ವಿಪಕ್ಷದ ಅಭ್ಯರ್ಥಿಯಾಗಿ ಹಿರಿಯ ನಾಯಕ ಯಶವಂತ್‌ ಸಿನ್ಹಾ ಸ್ಪರ್ಧಿಸಿದ್ದಾರೆ. ಮುರ್ಮು ಗೆಲುವು ಬಹುತೇಕ ಖಚಿತಗೊಂಡಿದೆ.
ಆರಂಭದಲ್ಲಿ ಸಂಸದರ ಮತ ಎಣಿಕೆ ನಡೆಯಲಿದೆ. ಇದರಲ್ಲೇ ಟ್ರೆಂಡ್‌ ಯಾವ ರೀತಿ ಇದೆ ಎಂಬುದನ್ನು ಚುನಾವಣಾಧಿಕಾರಿ ಪ್ರಕಟಿಸುತ್ತಾರೆ. ಬಳಿಕ ಇಂಗ್ಲೀಷ್‌ ವರ್ಣಮಾಲೆಯ ಪ್ರಕಾರ ಮೊದಲ 10 ರಾಜ್ಯಗಳ ಮತ ಎಣಿಕೆ ಪ್ರಾರಂಭವಾಗುತ್ತದೆ. ಅಂದರೆ ಅಸ್ಸಾಂ, ಆಂಧ್ರ ಹಿಗೆ ಎ ಅಕ್ಷರದಿಂದ ಪ್ರಾರಂಭವಾಗುವ ರಾಜ್ಯಗಳ ಮತ ಎಣಿಕೆ ಮೊದಲು ನಡೆಯುತ್ತದೆ. ಎಲ್ಲ ರಾಜ್ಯಗಳ ಮತ ಎಣಿಕೆ ಮುಗಿಯುವಾಗ ಸಂಜೆಯಾಗುತ್ತದೆ. ನಂತರ ಮುಖ್ಯ ಚುನಾವಣಾ ಅಧಿಕಾರಿ ಫಲಿತಾಂಶ ಪ್ರಕಟಿಸಲಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಶೇ.99 ಮತದಾನವಾಗಿದೆ. ಕಾಂಗ್ರೆಸ್‌, ಶಿವಸೇನೆ ಸಹಿತ ವಿಪಕ್ಷಗಳ ಕೆಲವು ಶಾಸಕರು ಕೂಡ ಮುರ್ಮು ಅವರಿಗೆ ಮತ ಹಾಕಿರುವುದರಿಂದ ಅವರು ನಿರಾಯಾಸದ ಗೆಲುವು ಸಾಧಿಸಲಿದ್ದಾರೆ ಎನ್ನಲಾಗಿದೆ.

























































error: Content is protected !!
Scroll to Top