ನಿಟ್ಟೆ : ಚಲಿಸುತ್ತಿದ್ದ ರಿಕ್ಷಾಕ್ಕೆ ಲಾರಿ ಡಿಕ್ಕಿ

ಕಾರ್ಕಳ : ಲಾರಿಯೊಂದು ಆಟೋ ರಿಕ್ಷಾಕ್ಕೆ ಡಿಕ್ಕಿಯಾದ ಘಟನೆ ನಿಟ್ಟೆ ಗ್ರಾಮದ ಕಲ್ಲಂಬಾಡಿ ಪದವು ಎಂಬಲ್ಲಿ ಮೇ 17ರಂದು ನಡೆದಿದೆ. ಪರಿಣಾಮ ರಿಕ್ಷಾ (KA 20 AB1392) ಪಲ್ಟಿಯಾಗಿ ಜಖಂಗೊಂಡಿದೆ. ಸುರೇಶ ಎಂಬವರು ಚಲಾಯಿಸುತ್ತಿದ್ದ ಆಟೋಗೆ ರಸ್ತೆಯ ತೀರಾ ಬಲಬದಿಗೆ ಬಂದ ಈಚರ್‌ ಲಾರಿ (KA 20 D 3527 ) ಡಿಕ್ಕಿಯಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ – ಮಹಿಳೆಗೆ ಹಲ್ಲೆ ದೂರು
‌ಕಾರ್ಕಳ : ಜಾತಿ ನಿಂದನೆ ಮಾಡಿ ಹಲ್ಲೆಗೈದಿರುವುದಾಗಿ ಮಹಿಳೆಯೊಬ್ಬರು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮೇ. 11ರಂದು ಬೆಳ್ಮಣ್ ಗ್ರಾಮದ ಕೊಡಿಮಾರು ಗುಂಡಾವು ಎಂಬಲ್ಲಿ ಕೆಲಸಕ್ಕೆ ಹೋಗಿದ್ದ ವೇಳೆ ಪ್ರಕಾಶ್ ಡಿʼಸೋಜಾ ಎಂಬವರು ಜಾತಿ ನಿಂದನೆ ಮಾಡಿ ಸೀಯಾಳದ ಚಿಪ್ಪಿನಿಂದ ಹಲ್ಲೆ ಮಾಡಿರುತ್ತಾರೆ. ಹಾರೆಯಿಂದ ಹಲ್ಲೆಗೈಯ್ಯಲು ಪ್ರಯತ್ನಿಸಿರುವುದಾಗಿ ರುಕ್ಕು ಅವರು ದೂರಿನಲ್ಲಿ ತಿಳಿಸಿದ್ಧಾರೆ.
ಸ್ಕೂಟರ್‌ ಗೆ ಬೈಕ್‌ ಡಿಕ್ಕಿ : ಸವಾರನಿಗೆ ಗಾಯ
ಕಾರ್ಕಳ : ಸ್ಕೂಟರ್‌ಗೆ ಬೈಕ್‌ ಡಿಕ್ಕಿಯಾದ ಘಟನೆ ಮೇ. 17ರಂದು ಬೈಪಾಸ್‌ನಲ್ಲಿ ನಡೆದಿದೆ. ಸ್ಕೂಟರ್‌ ಸವಾರ ರಾಮಚಂದ್ರ ಅವರು ರಸ್ತೆ ದಾಟಲು ನಿಂತಿದ್ದ ವೇಳೆ ಮೂಡುಬಿದ್ರೆ ಕಡೆಯಿಂದ ಬಂದ ಬೈಕ್‌ ಸವಾರ ಯತೀಶ ಕಿರಣ ಸಿ. ರಾವ್ ಸ್ಕೂಟರ್‌ ಹಿಂಬಾಗಕ್ಕೆ ಡಿಕ್ಕಿ ಹೊಡೆದಿರುತ್ತಾರೆ. ಪರಿಣಾಮ ರಾಮಚಂದ್ರ ಬೈಕ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಗಾಜರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













































\















error: Content is protected !!
Scroll to Top