Wednesday, July 6, 2022
spot_img
Homeಸುದ್ದಿಜೋಡುರಸ್ತೆಯಲ್ಲಿ ನಂದಿನಿ ಅಧಿಕೃತ ಮಳಿಗೆ ಶುಭಾರಂಭ

ಜೋಡುರಸ್ತೆಯಲ್ಲಿ ನಂದಿನಿ ಅಧಿಕೃತ ಮಳಿಗೆ ಶುಭಾರಂಭ

ಕಾರ್ಕಳ : ಬೆಳೆಯುತ್ತಿರುವ ಜೋಡುರಸ್ತೆ ಪೇಟೆಯಲ್ಲಿ ನಂದಿನಿ ಉತ್ಪನ್ನಗಳು ಬಹಳ ಸುಲಭವಾಗಿ ದೊರೆಯುವಂತೆ ಮಾಡುವಲ್ಲಿ ಕೆಎಂಎಫ್‌ನ ನಂದಿನಿ ಮಳಿಗೆ ಶುಭಾರಂಭಗೊಂಡಿದೆ. ಇಂತಹ ಮಳಿಗೆಗಳನ್ನು ತೆರೆಯುವುದರ ಮೂಲಕ ಉತ್ಪನ್ನಗಳ ಮಾರಾಟವಲ್ಲದೇ ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಾಗುವುದು ಎಂದು ಇಂಧನ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ಹೇಳಿದರು.

ಅವರು ಮೇ 18ರಂದು ಜೋಡುರಸ್ತೆ ದುರ್ಗಾಪ್ರಸಾದ್‌ ಕಾಂಪ್ಲೆಕ್ಸ್‌ ನಲ್ಲಿ ನಂದಿನಿಯ ಮಳಿಗೆ ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮೇ 17ರಂದು 5.48 ಲಕ್ಷ ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗಿದೆ. ರಾಜ್ಯದಲ್ಲಿನ 14 ಒಕ್ಕೂಟಗಳಲ್ಲಿ 90 ಲಕ್ಷ ಲೀಟರ್‌ ಪ್ರತೀ ದಿನ ಹಾಲು ಸಂಗ್ರಹವಾಗುತ್ತಿದೆ ಎಂದರು. ಜನಸಾಮಾನ್ಯರ ಭಾವನೆಗೆ ಅದ್ಭುತವಾಗಿ ಸ್ಪಂದಿಸುತ್ತಿರುವ ಸಚಿವ ಸುನೀಲ್‌ ಕುಮಾರ್‌ ಅವರಿಂದ ಮುಂದಿನ ದಿನಗಳಲ್ಲಿ ಕೆಎಂಎಫ್‌ಗೂ ವಿಶೇಷ ಸಹಕಾರ ದೊರೆಯಬೇಕಿದೆ ಎಂದು ಸುಚರಿತ ಶೆಟ್ಟಿ ಹೇಳಿದರು.

ಕುಕ್ಕುಂದೂರು ಗ್ರಾ.ಪಂ. ಅ‍ಧ್ಯಕ್ಷೆ ಶಶಿಮಣಿ ಸಂಪತ್, ನ್ಯಾಯವಾದಿ ರವೀಂದ್ರ ಮೊಯ್ಲಿ, ಕೆಎಂಎಫ್‌ ನಿರ್ದೇಶಕ ಬೋಳ ಸದಾಶಿವ ಶೆಟ್ಟಿ, ಸುಧಾಕರ್‌ ಶೆಟ್ಟಿ ಮುಡಾರು, ಸ್ಮಿತಾ ಆರ್.‌ ಶೆಟ್ಟಿ ಸೂಡ, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಅಶೋಕ್‌, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಡಾ. ರವಿರಾಜ್‌ ಉಡುಪ, ಸಹಾಯಕ ವ್ಯವಸ್ಥಾಪಕ ಸುಧಾಕರ್‌ ಉಡುಪಿ, ಮಳಿಗೆಯ ಮಾಲಕರಾದ ರಾಜೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ರಾಜೇಂದ್ರ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

ಕೆಎಂಎಫ್‌ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಚರಿತ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.










---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!