ಜಮ್ಮು ಕಾಶ್ಮೀರ: ಲಷ್ಕರ್-ಇ-ತೊಯ್ಬಾ ಸಂಘಟನೆಯ ಮೂವರು ಉಗ್ರರು ವಶಕ್ಕೆ

ಬಾರಾಮುಲ್ಲಾ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್‌ನ ಹೈಗಾಮ್ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ನಡೆಸಿದ ಕಾರ್ಯಚರಣೆಯಲ್ಲಿ, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಸ್ಥಳೀಯರಲ್ಲದ ಜನರ ಹತ್ಯೆಗಳು ಮತ್ತು ವಿವಿಧೆಡೆ ನಡೆದ ಗ್ರೆನೇಡ್ ದಾಳಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಹೈಗಮ್‌ ಪ್ರದೇಶದ ತೋಟಗಳಲ್ಲಿ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದ ಹಿನ್ನೆಲೆ ವಿವಿಧ ಸ್ಥಳಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ವೇಳೆ ಮೂವರು ಉಗ್ರರನ್ನು ಬಂಧನಕ್ಕೊಳಪಡಿಸಲಾಗಿದೆ.

ಸತತ ವಿಚಾರಣೆಯ ನಂತರ ಈ ಮೂವರು ಉಗ್ರರು ಲಷ್ಕರ್-ಇ-ತೊಯ್ಬಾದ ಸಂಘಟನೆಗೆ ಸೇರಿದವರು ಎಂದು ತಿಳಿದುಬಂದಿದೆ. ಶಂಕಿತರನ್ನು ಉಸ್ಮಾನ್‌-ಬಾದ್‌ ವಾರ್ಪೋರಾದ ತಫ್ಹೀಮ್‌ ರೆಯಾಜ್‌, ಬ್ರತ್‌ ಕಲಾನ್‌ ಸೋಪೋರ್‌ ನ ಸೀರತ್‌ ಶಾಬಾಜ್‌ ಮಿರ್‌ ಮತ್ತು ಮಿರ್ಪೋರಾ ಬ್ರತ್‌ಕಲ್‌ನ ರಮೀಜ್‌ ಅಹ್ಮದ್‌ ಖಾನ್‌ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಮೂರು ಚೀನಾ ನಿರ್ಮಿತ ಪಿಸ್ತೂಲ್‌ಗಳು, ಮದ್ದುಗುಂಡುಗಳು ಹಾಗೂ ಇತರ ಅಪರಾಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಪೊಲೀಸರು ತಿಳಿಸಿದ್ದಾರೆ.



































































































error: Content is protected !!
Scroll to Top