ಮೇ 15 ರೊಳಗಾಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶ : ಬಿ.ಸಿ. ನಾಗೇಶ್

ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶದ ಬಗ್ಗೆ ಸಚಿವ ಬಿ.ಸಿ‌. ನಾಗೇಶ್ ಮಾತನಾಡಿದ್ದು, ಮೇ 15 ರೊಳಗೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯ ಮಾಪನ ಕಾರ್ಯ ಪ್ರಗತಿಯಲ್ಲಿದ್ದು, ನಿಗದಿತ ಅವಧಿ ಪ್ರಕಾರವೇ ಮುಗಿಯಲಿದೆ. ಸರ್ಕಾರಿ ರಜೆಗಳು ಎದುರಾದ ಹಿನ್ನಲೆಯಲ್ಲಿ ಮೌಲ್ಯ ಮಾಪನ ಕೊಂಚ ವಿಳಂಬವಾಗಿದೆ. ಹೀಗಾಗಿ ಮೇ 15 ರೊಳಗೆ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಈ ಮೊದಲು ಮೇ 12 ರಂದು ಫಲಿತಾಂಶ ಪ್ರಕಟಿಸುವುದಾಗಿ ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆ ಹೇಳಿತ್ತು. ಆದರೆ ಮೌಲ್ಯ ಮಾಪನ ಕಾರ್ಯ ವಿಳಂಬವಾಗುತ್ತಿರುವ ಕಾರಣದಿಂದಾಗಿ ಮೇ 15 ರೊಳಗೆ ಫಲಿತಾಂಶ ಪ್ರಕಟಿಸಲು ನಿರ್ಧರಿಸಿರುವುದಾಗಿ ಇಲಾಖೆ ತಿಳಿಸಿದೆ.



































































































error: Content is protected !!
Scroll to Top