ಮೇ. 5 : ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ರಥೋತ್ಸವ

ಕಾರ್ಕಳ : ಇತಿಹಾಸ ಪ್ರಸಿದ್ಧ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಳದ ರಥೋತ್ಸವ ಮೇ. 5ರಂದು ನಡೆಯಲಿದೆ. ಕೊರೊನಾ ಕಾರಣದಿಂದ ಕಳೆದ 2 ವರ್ಷಗಳಲ್ಲಿ ಸಾಂಕೇತಿಕವಾಗಿ ರಥೋತ್ಸವ ನೆರವೇರಿದ್ದು, ಈ ಬಾರಿ ಸಾವಿರಾರು ಭಕ್ತ ಸಮೂಹದ ಸಮಕ್ಷಮದಲ್ಲಿ ವಿಜೃಂಭಣೆಯಲ್ಲಿ ಜರಗಲಿದೆ.

ಧಾರ್ಮಿಕ ಕಾರ್ಯಕ್ರಮ
ಮೇ. 1ರಿಂದ 4ರವರೆಗೆ ಬೆಳಗ್ಗೆ 9.30ಕ್ಕೆ ಫಲ ಕಾಣಿಕೆ ಸಮರ್ಪಣೆ, ಪ್ರಾರ್ಥನೆ, ಯಜ್ಞಶಾಲೆಗೆ ದೇವರ ಪ್ರವೇಶ, ಸಂಜೆ ಸುತ್ತುಬಲಿ, ಸ್ವರ್ಣ ಪಲ್ಲಕ್ಕಿ, ಹಗಲೋತ್ಸವ, ರಾತ್ರಿ ಚಕ್ರ ಉತ್ಸವ ಮತ್ತು ಬೆಳ್ಳಿ ಗರುಡ ವಾಹನ ಉತ್ಸವ ನಡೆಯಲಿದೆ.

ಮೇ. 4ರಂದು ರಾತ್ರಿ 8ಗಂಟೆಗೆ ರಾಮಸಮುದ್ರದ ಬಳಿಯ ಸ್ವರ್ಣ ಮಂಟಪ ಮೃಗಬೇಟೆ ಉತ್ಸವ. ಕೆರೆದೀಪ, ಚಕ್ರ ಉತ್ಸವ, ರಾತ್ರಿ ಸಣ್ಣ ರಥೋತ್ಸವ ಜರಗುವುದು.
ಮೇ. 5ರಂದು ಬೆಳಗ್ಗೆ 9.30ಕ್ಕೆ ಫಲ ಕಾಣಿಕೆ ಸಮರ್ಪಣೆ, ಪ್ರಾರ್ಥನೆ, ಯಜ್ಞಶಾಲೆಗೆ ದೇವರ ಪ್ರವೇಶ, ಸಂಜೆ 4 ಗಂಟೆಗೆ ಮಹಾ ಪೂರ್ಣಾಹುತಿ, ಸುತ್ತುಬಲಿ, ಚಕ್ರ ಉತ್ಸವ, ಸಂಜೆ 6 ಗಂಟೆಗೆ ರಥಾರೋಹಣ, ರಾತ್ರಿ 12 ಗಂಟೆಗೆ ಫಲಾವಳಿ, ಬ್ರಹ್ಮರಥ ಉತ್ಸವ, ಮಣ್ಣಗೋಪುರದಲ್ಲಿ ʼಸಾಯಂಕಾಲ ರಾಜೋಪಚಾರ ಸೇವೆʼ, ಬಳಿಕ ವಸಂತ ಪೂಜೆ, ರಾತ್ರಿ ಪೂಜೆ ಬಳಿಕ ಏಕಾಂತ ಸೇವೆ ನಡೆಯಲಿದೆ.
ಮೇ. 6ಕ್ಕೆ ಮಧ್ಯಾಹ್ನ 3.30ಕ್ಕೆ ಸ್ವರ್ಣ ಪಲ್ಲಕ್ಕಿ ಉತ್ಸವ, ಬಳಿಕ ಶ್ರೀ ದೇವರು ರಾಮಸಮುದ್ರಕ್ಕೆ ಹೊರಡುವುದು, ಅವಭೃತ ಸ್ನಾನ, ಕಂಕಣ ವಿಸರ್ಜನೆ, ರಾತ್ರಿ ಸಂಪ್ರೋಕ್ಷಣ, ವಸಂತ ಪೂಜೆ, ಅಂಕುರ ಪ್ರಸಾದ ಸೇವೆ ನಡೆಯಲಿದೆ.























error: Content is protected !!
Scroll to Top