16 ದಿನಗಳಲ್ಲಿ ಪೆಟ್ರೋಲ್ ತೈಲ ಬೆಲೆಯಲ್ಲಿ ರೂ.10 ಏರಿಕೆ

ನವದಹೆಲಿ: ತೈಲ ದರ ಏರಿಕೆ ಮುಂದುವರೆದಿದ್ದು, ಎ. 6ರಂದು ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 80 ಪೈಸೆ ಏರಿಕೆಯಾಗಿದೆ. ಈ ಮೂಲಕ 16 ದಿನಗಳಲ್ಲಿ 14 ಬಾರಿ ದರ ಪರಿಷ್ಕರಣೆಯಾಗಿ ಪ್ರತೀ ಲೀಟರ್ ತೈಲ ಬೆಲೆ ರೂ.10 ಏರಿಕೆಯಾಗಿದೆ.
ಏರಿಕೆ ಬಳಿಕ ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 111.07 ಹಾಗೂ ಡೀಸೆಲ್ ದರ 94.78ಕ್ಕೆ ಹೆಚ್ಚಳವಾಗಿದೆ. ಉತ್ಪಾದನೆ ಮತ್ತು ಮಾರಾಟ ದರ ವ್ಯತ್ಯಾಸದಿಂದಾಗಿ ತೈಲ ಕಂಪನಿಗಳಿಗೆ ಈಗಾಗಲೇ ಆಗಿರುವ ನಷ್ಟ ಸರಿದೂಗಿಸಲು ಮುಂದಿನ ದಿನಗಳಲ್ಲಿ ತೈಲ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಗಳಿವೆ.
ಮಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 110.27ರೂ. ಡಿಸೇಲ್‌ ಗೆ ರೂ. 94.03, ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್​ ರೂ. 120.5 ಡೀಸೆಲ್ ರೂ. 104.75, ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 110.83 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 100.92ರೂ. ಇನ್ನು ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ರೂ.115.1, ಡೀಸೆಲ್ ರೂ.99.81ಗೆ ಏರಿಕೆಯಾಗಿದೆ.













































error: Content is protected !!
Scroll to Top