ಕಾರ್ಕಳ : ಕ್ಯಾಥೋಲಿಕ್ ಸಭಾ ಕಾರ್ಕಳ ಘಟಕದ ಅಧ್ಯಕ್ಷ ನೇವಿಲ್ ಡಿ’ಸಿಲ್ವರ ಮುಂದಾಳತ್ವದಲ್ಲಿ ಹಾಗೂ ಚರ್ಚ್ ಸಹಾಯಕ ಗುರುಗಳು ವಂ|ವಿಜಿತ್ ಮಥಾಯಸರ ಸಹಯೋಗದಲ್ಲಿ ತಪಸ್ಸು ಕಾಲದ ತ್ಯಾಗದ ಪ್ರತೀಕವಾಗಿ ಕಾರ್ಕಳ ಸುರಕ್ಷಾ ಸೇವಾ ಆಶ್ರಮಕ್ಕೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಆಶ್ರಮದ ಅವಶ್ಯಕತೆಗೆ ನಗದು, ದಿನಸಿ ಮತ್ತು ಅಗತ್ಯದ ವಸ್ತುಗಳನ್ನು ನೀಡಲಾಯಿತು. ಸಂಚಾಲಾಕರಾಗಿ ಲವೀನಾ ಪಿರೇರಾ, ಪಾಸ್ಕಲ್ ಮೋನಿಸ್ ಜವಾಬ್ದಾರಿ ವಹಿಸಿದ್ದರು. ಆಲಿಸ್ ಆಲ್ವಾರಿಸ್ ಅವರು ಧನ್ಯವಾದ ಸಮರ್ಪಿಸಿದರು.
ಕಾರ್ಕಳ: ಕ್ಯಾಥೋಲಿಕ್ ಸಭಾ ಘಟಕದಿಂದ ಸುರಕ್ಷಾ ಆಶ್ರಮಕ್ಕೆ ಭೇಟಿ


































