ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡ ಹಿನ್ನಲೆಯಲ್ಲಿ ದೇಶದಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ ಸಾಮಾಜಿಕ ಜಾಲತಾಣಗಳ ಸೇವೆಗಳನ್ನು ರದ್ದು ಮಾಡಿದೆ. ಶ್ರೀಲಂಕಾ ಸರ್ಕಾರವು ಏ. 3 ರಂದು ಮಧ್ಯರಾತ್ರಿಯ ನಂತರ ರಾಷ್ಟ್ರವ್ಯಾಪಿ ಸಾಮಾಜಿಕ ಮಾಧ್ಯಮವನ್ನು ನಿರ್ಬಂಧಿಸಿದೆ ಎಂದು ಇಂಟರ್ನೆಟ್ ವೀಕ್ಷಣಾಲಯ ತಿಳಿಸಿದೆ. ಪ್ರಮುಖವಾಗಿ Facebook, Twitter, WhatsApp, YouTube, Snapchat, TikTok ಮತ್ತು Instagram ಸೇರಿದಂತೆ ಸುಮಾರು ಎರಡು ಡಜನ್ ಗೂ ಅಧಿಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಲಂಕಾ ಸರ್ಕಾರದ ನಿರ್ಧಾರದಿಂದ ಸೇವೆಯಿಂದ ವಂಚಿತವಾಗಲಿವೆ.
Recent Comments
ಕಗ್ಗದ ಸಂದೇಶ
on