ಶ್ರೀ ರಾಜಾರಾಜೇಶ್ವರಿ ನಿತ್ಯಾನಂದ ಮಂದಿರದ ಜೀರ್ಣೋದ್ಧಾರ : ಮನವಿ ಪತ್ರ ಬಿಡುಗಡೆ

ನಿಟ್ಟೆ : ಸುಮಾರು 70 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ನೆಲ್ಲಿ ಶ್ರೀರಾಜರಾಜೇಶ್ವರಿ ಸದ್ಗುರು ನಿತ್ಯಾನಂದ ಮಂದಿರದ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ನಿಟ್ಟಿನಲ್ಲಿ ಕೆಲಸ-ಕಾರ್ಯಗಳು ಆರಂಭಗೊಂಡಿದೆ.
ಜೀರ್ಣೋದ್ಧಾರಕ್ಕಾಗಿ ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಮನವಿ ಪತ್ರದ ಬಿಡುಗಡೆಯನ್ನು ಡಾ. ವೀರೇಂದ್ರ ಹೆಗ್ಗಡೆ ಅವರ ದಿವ್ಯ ಹಸ್ತದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎ. 2 ರಂದು ನಡೆಸಲಾಯಿತು.

ನೆಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುನಿಲ್ ಕೆ. ಆರ್., ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸುಧೀರ್ ಜೆ. ಹೆಗ್ಡೆ ಬೈಲೂರ್, ಕಾರ್ಯಾಧ್ಯಕ್ಷ ಮಹಾಬಲ ಸುವರ್ಣ, ಪ್ರಧಾನ ಕಾರ್ಯದರ್ಶಿ ಸುಮಿತ್ ಕೌಡೂರ್, ಕಾರ್ಯದರ್ಶಿ ಪ್ರವೀಣ್ ಸಾಲಿಯಾನ್, ನ್ಯಾಯವಾದಿ ಎಂ. ಕೆ. ವಿಜಯ ಕುಮಾರ್, ನಿತ್ಯಾನಂದ ಭಟ್ ಮತ್ತು ಭಾಸ್ಕರ್ ಧರ್ಮಸ್ಥಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು



































































































error: Content is protected !!
Scroll to Top