ಮಾ. 26-27 : ಶ್ರೀ ಮಹಮ್ಮಾಯಿ ಮುಖ್ಯಪ್ರಾಣ ಯಕ್ಷಗಾನ ಕಲಾ ಮಂಡಳಿಯ ಸುವರ್ಣ ಮಹೋತ್ಸವ

ಕಾರ್ಕಳ : ಶ್ರೀ ಮಹಮ್ಮಾಯಿ ಮುಖ್ಯಪ್ರಾಣ ಯಕ್ಷಗಾನ ಕಲಾ ಮಂಡಳಿಯ ಸುವರ್ಣ ಮಹೋತ್ಸವ ಸಂಭ್ರಮ, ಸನ್ಮಾನ, ಗೌರವಾರ್ಪಣೆ ಫೆ. 26 ಹಾಗೂ 27 ರಂದು ಮಾರಿಗುಡಿ ದೇವಸ್ಥಾನದ ಸಭಾಂಗಣದಲ್ಲಿ ಜರಲಿದೆ. ಫೆ. 26ರ ಮಧ್ಯಾಹ್ನ 3:30ರಿಂದ ನಡೆಯುವ ಉದ್ಘಾಟನಾ ಸಮಾರಂಭವನ್ನು ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಶ್ರೀ ಮಹಮ್ಮಾಯಿ ಮುಖ್ಯಪ್ರಾಣ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷ ವಸಂತ್‌ ಕೆ. ಅಧ್ಯಕ್ಷತೆ ವಹಿಸಲಿದ್ದು, ಗೌರವಾಧ್ಯಕ್ಷ ಹೆಚ್.‌ ನಾರಾಯಣ ಪ್ರಭು, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್.‌ ರಾಜು, ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಬಿ. ಗೋಪಾಲಕೃಷ್ಣ, ಹವಾಲ್ದಾರ್‌ ಸುರೇಶ್‌ ರಾವ್‌, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಪೊಲೀಸ್‌ ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌, ಸೋದೆ ಮಠ ಸುಬ್ರಹ್ಮಣ್ಯ ಉಪಾಧ್ಯಾಯ, ಸಿ.ಎ. ವಾಸುದೇವ ರಾವ್‌, ರಮೇಶ್‌ ದೇವಾಡಿಗ, ಅರ್ಚಕ ರಘುರಾಮ ಆಚಾರ್‌ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ʼಓಂ ನಮ: ಶಿವಾಯʼ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಸಮಾರೋಪ ಸಮಾರಂಭ

ಫೆ. 27ರಂದು ಬೆಳಿಗ್ಗೆ ಗಂಟೆ 9.30ಕ್ಕೆ ಸಮಾರೋಪ ಸಮಾರಂಭವನ್ನು ಸಚಿವ ವಿ. ಸುನಿಲ್‌ ಕುಮಾರ್‌ ಉದ್ಘಾಟಿಸಲಿರುವರು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಮಣ ಆಚಾರ್‌ ಅಧ್ಯಕ್ಷತೆ ವಹಿಸಲಿದ್ದು, ಗೌರವಾಧ್ಯಕ್ಷ ಹೆಚ್.‌ ನಾರಾಯಣ ಪ್ರಭು, ಈಶ ವಾಸಂ ಟ್ರಸ್ಟ್‌ ನ ಅಧ್ಯಕ್ಷ ರಾಮ್‌ ಭಟ್‌, ಮುಖ್ಯಪ್ರಾಣ ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಕಲ್ಕೂರು, ಮಹಮ್ಮಾಯಿ ದೇವಸ್ಥಾನದ ಮೊಕ್ತೇಸರ ಕೆ. ಜೆ. ರಾಘವೇಂದ್ರ, ಉದ್ಯಮಿ ವಿಜಯ ಶೆಟ್ಟಿ, ನಾರಾವಿ ಜಗದೀಶ್‌ ಅಂಚನ್‌, ಶಿವಂ ಎಲೆಕ್ಟ್ರಿಕಲ್ಸ್‌ ಮಾಲಕ ಗುರುಪ್ರಸಾದ ಶೆಟ್ಟಿ, ಸಂಜಯ್‌ ಕುಮಾರ್‌ ರಾವ್‌ ಮಂಗಳೂರು ಉಪಸ್ಥಿತರಿರುವರು.
ಸತೀಶ್‌ ಮಡಿವಾಳ ಇವರ ಯಕ್ಷ ನಾಟ್ಯಾಂಜಲಿ ತೆಂಕುತಿಟ್ಟು ಇದರ 4ನೇ ಮುದ್ರಣದ ಪುಸ್ತಕ ಇದೇ ಸಂದರ್ಭ ಬಿಡುಗಡೆಯಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ನಡೆಯಲಿದೆ.



































































































error: Content is protected !!
Scroll to Top