Thursday, May 19, 2022
spot_img
Homeಸುದ್ದಿನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ವತಿಯಿಂದ ಛಾಯಾಗ್ರಹಣ ಮತ್ತು ಚಲನಚಿತ್ರ ನಿರ್ಮಾಣದಲ್ಲಿ ಒಂದು ವರ್ಷದ ಪಿಜಿ...

ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ವತಿಯಿಂದ ಛಾಯಾಗ್ರಹಣ ಮತ್ತು ಚಲನಚಿತ್ರ ನಿರ್ಮಾಣದಲ್ಲಿ ಒಂದು ವರ್ಷದ ಪಿಜಿ ಡಿಪ್ಲೊಮಾ

ಕಾರ್ಕಳ : ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ವತಿಯಿಂದ 2022 – 23ನೇ ಶೈಕ್ಷಣಿಕ ವರ್ಷದಿಂದ ಒಂದು ವರ್ಷದ ಸ್ನಾತಕೋತ್ತರ ಛಾಯಾಗ್ರಹಣ ಮತ್ತು ಚಲನಚಿತ್ರ ನಿರ್ಮಾಣ ಡಿಪ್ಲೊಮಾ ಕೋರ್ಸ್ ಆರಂಭಿಸಲಾಗಿದೆ. ಈ ಕೋರ್ಸ್‍ಗೆ ಪ್ರವೇಶ ಪಡೆಯಲಿಚ್ಛಿಸುವವರು ಯಾವುದಾದರೂ ವಿಷಯದಲ್ಲಿ ಪದವಿ ಹೊಂದಿರಬೇಕು. ಈ ಕೋರ್ಸ್‍ನ ಶುಲ್ಕ 1 ಲಕ್ಷ ರೂ. ಆಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಕೋರ್ಸನ್ನು ಆರಂಭಿಸಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‍ಗೆ ಸಂದಿದೆ. ಮೊದಲ ವರ್ಷದಲ್ಲಿ ಒಟ್ಟು 10 ವಿದ್ಯಾರ್ಥಿಗಳನ್ನು ಈ ಕೋರ್ಸ್‍ಗೆ ದಾಖಲಿಸಿಕೊಳ್ಳಲಾಗುತ್ತದೆ.

ನಿಟ್ಟೆ ಇನ್‍ಸ್ಟಿಟ್ಯೂಟ್ ಆಫ್‍ ಕಮ್ಯುನಿಕೇಷನ್ 2012ರಲ್ಲಿ ಸ್ಥಾಪನೆಗೊಂಡಿದ್ದು, ಮಾಧ್ಯಮ ಮತ್ತು ಸಂವಹನ ವಿಷಯದಲ್ಲಿ ಬಿ.ಎ. ಹಾಗೂ ಎಂ.ಎ. ಪದವಿ ಕೋರ್ಸ್‍ಗಳನ್ನು ನಡೆಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡು ಮಾಧ್ಯಮ ಮತ್ತು ಸಂವಹನ ವಿಷಯದಲ್ಲಿ ಆನರ್ಸ್ ಪದವಿಯನ್ನು ಮೊಟ್ಟ ಮೊದಲ ಬಾರಿಗೆ ಆರಂಭಿಸಿರುವುದು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‍ನ ಹೆಗ್ಗಳಿಕೆಯಾಗಿದೆ.

ಒಂದು ವರ್ಷದ ಸ್ನಾತಕೋತ್ತರ ಛಾಯಾಗ್ರಹಣ ಮತ್ತು ಚಲನಚಿತ್ರ ನಿರ್ಮಾಣ ಡಿಪ್ಲೊಮಾ ಕೋರ್ಸ್‍ನಲ್ಲಿ ಪ್ರವಾಸ ಬರವಣಿಗೆ ಮತ್ತು ಛಾಯಾಗ್ರಹಣ, ಡಿಜಿಟಲ್ ಅನಿಮೇಷನ್, ಜಾಹೀರಾತು ಫೋಟೊಗ್ರಫಿ, ಆಡಿಯೊ ಮತ್ತು ವಿಡಿಯೊ ಸಂಪಾದನೆ, ಸಾಕ್ಷ್ಯಚಿತ್ರ ನಿರ್ಮಾಣ ಇತ್ಯಾದಿ ವಿಷಯಗಳನ್ನು ಕಲಿಸಲಾಗುವುದು.

ಕಾರ್ಯಕ್ರಮದ ಅಗತ್ಯ
ಕಳೆದ ದಶಕದಲ್ಲಿ ಅಂತರ್ಜಾಲ ಮಾಧ್ಯಮವು ಅತಿ ವೇಗವಾಗಿ ಬೆಳೆದಿದೆ. ಇದರಿಂದಾಗಿ ಮಾಧ್ಯಮ ಉದ್ಯಮದ ಗಮನವು ದಿನಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಂದ ಅಂತರ್ಜಾಲ ಆಧಾರಿತ ಸಂವಹನ ಕ್ಷೇತ್ರಗಳತ್ತ ಹೊರಳಿದೆ. ಫೇಸ್‍ಬುಕ್, ವಾಟ್ಸ್‍ಆಪ್ ಹಾಗೂ ಯೂಟ್ಯೂಬ್ ಬಳಕೆ ಹೆಚ್ಚಾಗಿದ್ದು, ಆಡಿಯೊ ಮತ್ತು ವಿಡಿಯೊ ಬಳಕೆಯೂ ವೃದ್ಧಿಸಿದೆ. 2020ರಲ್ಲಿ ಕೋವಿಡ್-19 ಪಿಡುಗಿನಿಂದಾಗಿ ಹಲವು ಉದ್ಯಮಗಳು ನಷ್ಟ ಅನುಭವಿಸುತ್ತಿದ್ದರೂ ಮನರಂಜನಾ ಉದ್ಯಮವು ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ. ನೆಟ್‍ಫ್ಲಿಕ್ಸ್, ಅಮೇಜಾನ್ ಪ್ರೈಂ, ಹಾಟ್‍ಸ್ಟಾರ್ ನಂತಹ ಒಟಿಟಿ ವೇದಿಕೆಗಳು ಅತ್ಯಧಿಕ ಪ್ರಗತಿಯನ್ನು ಸಾಧಿಸಿವೆ. ಇದರಿಂದ ಆಡಿಯೊ-ವಿಡಿಯೊಕುಶಲತೆ ಬಲ್ಲ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಬೇಡಿಕೆಯೂ ಸೃಷ್ಟಿಯಾಗಿದೆ.

ಚಲನಚಿತ್ರೋತ್ಸವ
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ವತಿಯಿಂದ 2017ರಿಂದಲೂ ನಿಟ್ಟೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದೆ. ಮಂಗಳೂರಿನ ನಾಗರಿಕರಿಗೆ ಅತ್ಯುತ್ತಮ ಚಲನಚಿತ್ರಗಳನ್ನು ವೀಕ್ಷಿಸುವ ಹಾಗೂ ಚಿತ್ರ ನಿರ್ಮಾಪಕರು, ನಿರ್ದೇಶಕರ ಜೊತೆಗೆ ಸಂವಾದ ನಡೆಸುವ ಅವಕಾಶವನ್ನು ಸಂಸ್ಥೆಯು ಉಚಿತವಾಗಿ ಒದಗಿಸಿದೆ. ಸಂಸ್ಥೆಯ ವಿದ್ಯಾರ್ಥಿಗಳು ನಡೆಸುವ ಈ ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ವೀಕ್ಷಣೆ ಮಾತ್ರವಲ್ಲದೇ, ಪ್ರಖ್ಯಾತ ನಿರ್ದೇಶಕರು, ತಂತ್ರಜ್ಞರ ಜೊತೆಗೆ ಸಂವಾದ ನಡೆಸಲು ವಿದ್ಯಾರ್ಥಿಗಳಿಗೆ ಅತ್ಯುತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಚಲನಚಿತ್ರ ಉದ್ಯಮದಲ್ಲಿ ಇಂಟರ್ನ್‍ಷಿಪ್ ನಡೆಸುವುದು ಹಾಗೂ ಉದ್ಯೋಗ ಗಳಿಕೆಗೆ ಇದು ಸಹಾಯ ಮಾಡುತ್ತಿದೆ.

ಸಲಕರಣೆ
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಅತ್ಯುತ್ತಮ ಸಿನಿಮಾ ಸಂಬಂಧಿತ ಸಲಕರಣೆಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ:
ಕೆನಾನ್‍ಆರ್ 5, ಬ್ಲ್ಯಾಕ್‍ಮ್ಯಾಜಿಕ್ ಪಾಕೆಟ್ ಸಿನಿಮಾಕ್ಯಾಮೆರಾ, ಅಡೋಬಿ ಮಾಸ್ಟರ್‍ಕಲೆಕ್ಷನ್, ಡಾ ವಿನ್ಸಿ ರಿಸಾಲ್ವ್, ಸೋನಿ ಪಿಎಕ್ಸ್‍ಡಬ್ಲ್ಯೂ-ಜೆಡ್90 4ಕೆ ಕ್ಯಾಮ್‍ಕಾರ್ಡರ್, ಬ್ಲ್ಯಾಕ್‍ಮ್ಯಾಜಿಕ್ 4ಕೆ ವಿಡಿಯೊ ಮಿಕ್ಸರ್, ಆಲೆನ್‍ಅಂಡ್ ಹೀತ್‍ಆಡಿಯೊ ಮಿಕ್ಸರ್, ಇನ್‍ಸ್ಪೈರ್‍ಡಿಜೆಐಡ್ರೋನ್, ಫೈನಲ್‍ಕಟ್ ಸ್ಟುಡಿಯೊ ಮತ್ತು ಹಲವು ಕ್ಯಾಮೆರಾ ಲೆನ್ಸ್‍ಗಳು ಸಂಸ್ಥೆಯು ಹೊಂದಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!