ಕಾರ್ಕಳ : ಕಾರ್ಕಳ ತಾಲೂಕು ಮಾಳ ಬಳಿಯ ಹುಕ್ರಟ್ಟೆ ಎಂಬಲ್ಲಿ ಕಾಡು ಕೋಣಗಳ ಹಿಂಡು ರಸ್ತೆ ದಾಟುತ್ತಿದ್ದ ದೃಶ್ಯ ಕಂಡುಬಂದಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ. ಸುಮಾರು 15 ಕಾಡುಕೋಣಗಳ ಹಿಂಡು ಕಳೆದ ಒಂದು ವಾರದಿಂದ ಈ ಪರಿಸರದಲ್ಲಿ ಕಾಣಸಿಗುತ್ತಿದೆ ಎಂದು ಪ್ರತ್ಯಕ್ಷದರ್ಶಿ ಪ್ರಶಾಂತ್ ತಿಳಿಸಿದ್ದಾರೆ.
ಕಾಡು ಕೋಣಗಳ ಹಿಂಡು ನಾಡಿಗೆ ಲಗ್ಗೆಯಿಟ್ಟಿರುವುದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಭತ್ತ, ಬಾಳೆ, ಅಡಿಕೆ, ತೆಂಗು ಸಸಿಗೆ ಹಾನಿ ಮಾಡುವ ಕಾಡುಕೋಣಗಳು ಮನುಷ್ಯರಿಗೆ ತೊಂದರೆ ಮಾಡಿರುವುದು ವಿರಳ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಯೋರ್ವರು.
