ವರ್ಗಾವಣೆ ಹೊಂದಿರುವ ಪೊಲೀಸರಿಗೆ ಬೀಳ್ಕೊಡುಗೆ

ಕಾರ್ಕಳ : ಕಾರ್ಕಳ ನಗರ ಪೊಲೀಸ್‌ ಠಾಣೆಯಿಂದ ವರ್ಗಾವಣೆಗೊಂಡಿರುವ ರಾಮ ಪ್ರಭು, ಹೆಚ್.ಸಿ. ಸುಂದರ ಗೌಡ, ನಾಗರಾಜ, ರಾಘವೇಂದ್ರ ಶೆಟ್ಟಿ, ದಿನೇಶ ಅವರನ್ನು ಜು. 31ರಂದು ನಗರ ಪೊಲೀಸ್‌ ಠಾಣೆಯಲ್ಲಿ ಬೀಳ್ಕೊಡಲಾಯಿತು. ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್, ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಕಾರ್ಕಳ ನಗರ ಠಾಣಾ ಎಸ್ಐ ಮಧು ಬಿ.ಇ., ಅಪರಾಧ ವಿಭಾಗದ ಎಸ್ಐ ದಾಮೋದರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಮ ಪ್ರಭು ಅವರು ಎಎಸ್‌ಐ ಆಗಿ ಹೆಬ್ರಿ ಪೊಲೀಸ್‌ ಠಾಣೆಗೆ, ಸುಂದರ ಗೌಡ ಕಾರ್ಕಳ ಗ್ರಾಮಾಂತರ, ರಾಘವೇಂದ್ರ ಶೆಟ್ಟಿ ಕೋಟ, ನಾಗರಾಜ ಅವರು ಹಿರಿಯಡ್ಕ, ದಿನೇಶ್‌ ಅವರು ಅಮಾಸೆಬೈಲು ಠಾಣೆಗೆ ವರ್ಗಾವಣೆ ಹೊಂದಿರುತ್ತಾರೆ.

















































































error: Content is protected !!
Scroll to Top