Wednesday, January 26, 2022
spot_img
Homeಸ್ಥಳೀಯ ಸುದ್ದಿನಲ್ಲೂರು : ಮನೆಯೇ ಮೊದಲ ಪಾಠಶಾಲೆ ಮಗ್ಗಿ ಪುಸ್ತಕ ಬಿಡುಗಡೆ

ನಲ್ಲೂರು : ಮನೆಯೇ ಮೊದಲ ಪಾಠಶಾಲೆ ಮಗ್ಗಿ ಪುಸ್ತಕ ಬಿಡುಗಡೆ

ಆಧುನಿಕತೆ-ಆನ್‌ಲೈನ್‌ ಶಿಕ್ಷಣದಿಂದಾಗಿ ಮನೆ ಪಾಠ ಮರೆಯದಿರಲಿ-ಸುನಿಲ್‌ ಕುಮಾರ್‌

ಕಾರ್ಕಳ : ಆಧುನಿಕತೆ, ಆನ್‌ಲೈನ್‌ ಶಿಕ್ಷಣದ ಪ್ರಭಾವಕ್ಕೆ ಒಳಗಾಗಿ ಮಕ್ಕಳಿಗೆ ದೊರೆಯುತ್ತಿದ್ದ ಮನೆಪಾಠ ಮರೆಯಬಾರದು. ಈ ನಿಟ್ಟಿನಲ್ಲಿ ಪೋಷಕರು ವಿಶೇಷ ಮುತುವರ್ಜಿ ವಹಿಸುವುದು ಅಗತ್ಯವೆಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.
ಅವರು ಆ. 1ರಂದು ನಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮನೆಯೇ ಮೊದಲ ಪಾಠಶಾಲೆ ಮಗ್ಗಿ ಪುಸ್ತಕ ಬಿಡುಗಡೆಗೊಳಿಸಿ ಬಳಿಕ ಮಾತನಾಡಿದರು.
ವಿನೂತನ ಪರಿಕಲ್ಪನೆಯೊದಿಗೆ ಮಗ್ಗಿ ಪುಸ್ತಕ ಹೊರತರಲಾಗಿದೆ. ಕ್ಷೇತ್ರದ ಸುಮಾರು 16 ಸಾವಿರ ಮಕ್ಕಳಿಗೆ ಈ ಪುಸ್ತಕ ವಿತರಣೆಯಾಗಲಿದ್ದು, ಪೋಷಕರು ಈ ಉಪಯುಕ್ತ ಪುಸ್ತಕವನ್ನು ಓದಿ ಮಕ್ಕಳಿಗೆ ತಿಳಿಸಿಕೊಡಬೇಕೆಂದು ಮನವಿ ಮಾಡಿಕೊಂಡರು.
ಕರ್ನಾಟಕ ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಕಳದ ನಿಕಟಪೂರ್ವ ಬಿಇಒ ಶಶಿಧರ ಜಿ.ಎಸ್.‌, ಬಿಇಒ ವೆಂಕಟೇಶ್ ನಾಯಕ್, ಅಕ್ಷರ ದಾಸೋಹ ಅಧಿಕಾರಿ ಭಾಸ್ಕರ್, ಸಿಡಿಪಿಒ ಉಮೇಶ್, ನಲ್ಲೂರು ಗ್ರಾ.ಪಂ. ಪ್ರಭಾರ ಅಧ್ಯಕ್ಷ ಜಯಕೀರ್ತಿ ಜೈನ್, ಸಂಯೋಜಕರಾದ ಉದ್ಯಮಿ ಅನಂತಕೃಷ್ಣ ಶೆಣೈ ರೆಂಜಾಳ, ಜಿ.ಪಂ. ನಿಕಟಪೂರ್ವ ಸದಸ್ಯೆ ದಿವ್ಯಶ್ರೀ ಅಮೀನ್‌, ತಾ.ಪಂ. ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ರಮಾನಂದ ಶೆಟ್ಟಿ, ಗೋಪಶೆಟ್ಟಿ, ಮಹಾಬಲ ಶೆಟ್ಟಿ ನಲ್ಲೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಆರ್‌ಪಿ ಕೃಷ್ಣಕುಮಾರ್‌ ಸ್ವಾಗತಿಸಿ, ಮುಖ್ಯ ಶಿಕ್ಷಕ ನಾಗೇಶ್‌ ನಲ್ಲೂರು ಕಾರ್ಯಕ್ರಮ ನಿರೂಪಿಸಿದರು. ದಿವ್ಯಶ್ರೀ ಅಮೀನ್‌ ವಂದಿಸಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!