ಡ್ರೀಮ್ ಫೈನಾನ್ಸ್ ಮಾಲಕನ ಭೀಕರ ಹತ್ಯೆ

ಕುಂದಾಪುರ: ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ತಡರಾತ್ರಿ ಕೊಲೆಯೊಂದು ನಡೆದಿದೆ. ಡ್ರೀಮ್ ಫೈನಾನ್ಸ್ ನ ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ (33) ಎಂಬವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ತಾಲೂಕು ವ್ಯಾಪ್ತಿಯ ಸಳ್ವಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಅಜೇಂದ್ರ ಶೆಟ್ಟಿ ನಿನ್ನೆ ತಡರಾತ್ರಿಯ ತನಕ ಮನೆಗೆ ಬಂದಿರಲಿಲ್ಲ, ಫೋನ್‍ ಕರೆಗಳಿಗೂ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಮನೆಯವರು ಅವರನ್ನು ಹುಡುಕಾಡಿದಾಗ ಕೊಲೆಯಾದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಇವರು ಕಳೆದ ಏಳು ವರ್ಷಗಳಿಂದ ಸಳ್ವಾಡಿಯಲ್ಲಿ ಫೈನಾನ್ಸ್ ನಡೆಸುತ್ತಿದ್ದರು. ಹಣಕಾಸಿನ ವಿಚಾರವೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಕೊಲೆಗೈದ ಆರೋಪಿಗಳು ಅಜೇಂದ್ರ ಶೆಟ್ಟಿ ಅವರ ಕಾರನ್ಣೇ ಬಳಸಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದ್ದು ಕಂಡ್ಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.



















































































error: Content is protected !!
Scroll to Top