ಬೆಂಗಳೂರು : ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆ ಬಳಿ ನಡೆದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಬೈಕ್ನಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನ ಕುತ್ತಿಗೆಗೆ ಸಿಲುಕಿದ್ದ ಗಾಳಿಪಟ ಬಿಡಿಸಿಕೊಳ್ಳಲು ಹೋಗಿ ಕೈಬೆರಲು ಕಟ್ ಆಗಿದೆ.
ಸ್ಥಳೀಯರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿರುವ ಬೈಕ್ ಸವಾರ, ಗಾಳಿಪಟ ಹಾರಿಸೋದನ್ನ ಬ್ಯಾನ್ ಮಾಡಿ ಅಂತ ಮನವಿ ಮಾಡಿದ್ದಾರೆ.
ಮನೆಯ ಟೆರೆಸ್ ನಿಂದ ಗಾಳಿಪಟ ಹಾರಿಸಿದ ಮಾಂಜಾ ದಾರ ಕಟ್ ಆಗಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಡುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೈಕ್ ಸವಾರನ ಕತ್ತು ಕುಯ್ದ ಗಾಳಿಪಟ ದಾರ












