ಸಹಕಾರಿ ಸಂಘ ಆದಾಯ ತೆರಿಗೆಯಿಂದ ಮುಕ್ತ

ಕಾರ್ಕಳ : ಸಹಕಾರಿ ಸಂಘದ ಎಲ್ಲ ವರ್ಗದ ಸದಸ್ಯರೊಂದಿಗೆ ವ್ಯವಹಾರ ನಡೆಸಿದರೂ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವ ಕುರಿತು ಕರ್ನಾಟಕ ರಾಜ್ಯ ಸಹಕಾರ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ ಎಸ್. ಕೆ. ಹಾಗೂ ಸಹಕಾರಿ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಹರ್ಷ ವ್ಯಕ್ತಪಡಿಸಿರುತ್ತಾರೆ.
ದೇಶದಲ್ಲಿನ ಲಕ್ಷಾಂತರ ಸಹಕಾರಿಗಳಿಗೆ ಮತ್ತು ಸಹಕಾರ ಸಂಸ್ಥೆಗಳಿಗೆ ಸುಪ್ರೀಂಕೋರ್ಟ್‍ನ ಸಿವಿಲ್ ಎಪಿಲ್ ನಂಬ್ರ 3/268/2021ರಲ್ಲಿನ ಜ. 12 ರಂದು ಸುಪ್ರೀಂಕೋರ್ಟ್‍ ನೀಡಿದ ತೀರ್ಪಿನಂತೆ ಸಹಕಾರಿ ರಂಗವು ಆದಾಯ ಇಲಾಖೆಯ ತೊಂದರೆಗಳಿಂದ ಮುಕ್ತಗೊಂಡಿರುತ್ತದೆ. ಹೈದ್ರಾಬಾದ್‍ನ ಸಿಟಿಜನ್ ಕೋ-ಆಪರೇಟಿವ್ ಸೊಸೈಟಿ ತೀರ್ಪಿನಿಂದ ಆದ ವ್ಯತಿರಿಕ್ತ ಪರಿಣಾಮದಿಂದ ಅನೇಕ ಸಹಕಾರಿಸಂಘಗಳಿಗೆ ವಿವಿಧ ತೊಂದರೆಯಾಗಿತ್ತು. ನೂತನ ಕಾಯ್ದೆಯಿಂದ ಸಹಕಾರಿ ಸಂಘದ ಸದಸ್ಯರಾದರೆ ಎಲ್ಲಾ ರೀತಿಯ ಸದಸ್ಯ ಎಂದು ಪರಿಗಣಿಸಲ್ಪಡುವುದು. ಇದರಿಂದ ಸಹಕಾರಿ ರಂಗದಲ್ಲಿ ಪ್ರಗತಿ ಕಾಣಲು ಸಾಧ್ಯವೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.





























































































error: Content is protected !!
Scroll to Top