ಚೆಕ್ಕು ಬೌನ್ಸ್ ಪ್ರಕರಣದಲ್ಲಿ ಸಮ್ಮಂದಪಟ್ಟ ವ್ಯಕ್ತಿಯು ಕೈಗೊಳ್ಳಬಹುದಾದ ಮುಂಜಾಗ್ರತಾ ರಕ್ಷಣಾತ್ಮಕ ಕ್ರಮಗಳು

  1. ಯಾವುದೇ ವ್ಯಕ್ತಿ ತನ್ನ ಬ್ಯಾಂಕ್ ಖಾತೆಗೆ ಸಮ್ಮಂದಪಟ್ಟ ಚೆಕ್ಕನ್ನು ಕಳಕೊಂಡಲ್ಲಿ ಅಥವಾ ಯಾರಾದರೂ ಆತನ ವಶದಿಂದ ಚೆಕ್ಕನ್ನು ಕಳವು ಮಾಡಿದಲ್ಲಿ ಅಥವಾ ಮೋಸ ಅಥವಾ ವಂಚನೆಯಿಂದ ಹೊಂದಿದ ಸಂದರ್ಭದಲ್ಲಿ ಅಂತಹಾ ಚೆಕ್ಕನ್ನು ಸಮ್ಮಂದಪಟ್ಟ ಬ್ಯಾಂಕಿಗೆ ನಗದೀಕರಣಕ್ಕಾಗಿ ಹಾಜರು ಪಡಿಸುವುದಕ್ಕಿಂತ ಮುಂಚಿತವಾಗಿ ಚೆಕ್ಕಿನ ಖಾತೆಗೆ ಸಮ್ಮಂದಪಟ್ಟ ಬ್ಯಾಂಕಿಗೆ ಸದರಿ ಚೆಕ್ಕನ್ನು ನಗದೀಕರಣಕ್ಕಾಗಿ ಸ್ವೀಕರಿಸದಂತೆ ಕೋರಿ ಲಿಖಿತ ಪತ್ರವನ್ನು ನೀಡಿ ಆ ಕೂಡಲೇ ಸ್ಥಳೀಯ ಪೋಲೀಸರಿಗೆ ಸಹಾ ಲಿಖಿತವಾದ ದೂರನ್ನು ನೀಡಿ ಈ ರೀತಿಯ ಕ್ರಮ ಕೈಗೊಂಡ ಬಗ್ಗೆ ಸೂಕ್ತ ರಶೀದಿ ಅಥವಾ ದಾಖಲೆಯನ್ನು ಇಟ್ಟುಕೊಳ್ಳುವುದು ಅವಶ್ಯಕವಾಗಿರುತ್ತದೆ. ಒಂದು ವೇಳೆ ಈ ರೀತಿಯಾಗಿ ಕಳಕೊಂಡ ಚೆಕ್ಕು ಯಾರ ವಶ ಇದೆ ಎಂಬ ಬಗ್ಗೆ ಮಾಹಿತಿಯನ್ನು ಚೆಕ್ಕಿಗೆ ಸಮ್ಮಂದಪಟ್ಟ ವ್ಯಕ್ತಿ ಹೊಂದಿರುವ ಪಕ್ಷದಲ್ಲಿ ಅಂತಹಾ ವ್ಯಕ್ತಿಗೆ ಚೆಕ್ಕನ್ನು ದುರುಪಯೋಗ ಪಡಿಸದಂತೆ ಮತ್ತು ನಗದೀಕರಣಕ್ಕಾಗಿ ಬ್ಯಾಂಕಿಗೆ ಹಾಜರು ಪಡಿಸದಂತೆ ಲಿಖಿತವಾಗಿ ತಿಳಿಸುವುದು ಸಹಾ ಅವಶ್ಯಕವಾಗಿರುತ್ತದೆ. ಕಾರಣ ಮುಂದೆ ಚೆಕ್ಕು ಹೊಂದಿದಾತ ನ್ಯಾಯಾಲಯದಲ್ಲಿ ಸಲ್ಲಿಸಬಹುದಾದ ಪಿರ್ಯಾದಿಯ ತನಿಖೆಯ ಸಂದರ್ಭದಲ್ಲಿ ಚೆಕ್ಕಿಗೆ ಸಹಿ ಮಾಡಿರುವ ವ್ಯಕ್ತಿಯು ಚೆಕ್ಕು ಪಿರ್ಯಾದಿದಾರನ ವಶ ಸೂಕ್ತ ಪ್ರತಿಫಲ ರಹಿತವಾಗಿ ಹೇಗೆ ಬಂತು ಮತ್ತು ಪಿರ್ಯಾದಿದಾರ ಯಾವ ರೀತಿಯಾಗಿ ತನ್ನ ಚೆಕ್ಕನ್ನು ದುರುಪಯೋಗ ಪಡಿಸಿಕೊಂಡಿರುತ್ತಾನೆ ಮತ್ತು ಯಾವ ಕಾರಣಕ್ಕಾಗಿ ತಾನು ನಿರಪರಾಧಿ ಎಂಬ ನಿಲುವನ್ನು ಸಮರ್ಥಿಸಿಕೊಳ್ಳಬೇಕಾಗಿರುವುದು ಆರೋಪಿತನ ಮಹತ್ವದ ಹೊಣೆಗಾರಿಕೆಯಾಗಿರುತ್ತದೆ ಮತ್ತು ಈ ಬಗ್ಗೆ ಸೂಕ್ತ ನಂಬಲು ಅರ್ಹವಾದ ಸಾಕ್ಷ್ಯಾಧಾರವನ್ನು ನ್ಯಾಯಾಲಯಕ್ಕೆ ಒದಗಿಸುವುದು ಆರೋಪಿತನ ಮುಖ್ಯ ಜವಾಬ್ದಾರಿಯಾಗಿರುತ್ತದೆ. ಈ ರೀತಿಯಾಗಿ ಆರೋಪಿತನು ತನ್ನ ರಕ್ಷಣಾತ್ಮಕ ನಿಲುವನ್ನು ಅಥವಾ ವಾದವನ್ನು ಸಮರ್ಥಿಸಿಕೊಳ್ಳಲು ಆತ ಸೂಕ್ತ ದಾಖಲೆಯನ್ನು ನ್ಯಾಯಾಲಯಕ್ಕೆ ಒದಗಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಆರೋಪಿ ತನಗೆ ಬೇಕಾಗುವ ಮಹತ್ವದ ದಾಖಲೆಗಳನ್ನು ಇತರರ ಸುಪರ್ಧಿಯಿಂದ ನ್ಯಾಯಾಲಯದ ಅದೇಶದ ಮೂಲಕ ನ್ಯಾಯಾಲಯಕ್ಕೆ ತರಿಸಿ ತನ್ನ ರಕ್ಷಣಾತ್ಮಕ ನಿಲುವನ್ನು ಸಮರ್ಥಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾನೆ. ಮಾತ್ರವಲ್ಲದೇ ತನ್ನ ಅಥವಾ ತನಗೆ ಸಮ್ಮಂದಪಟ್ಟ ಚೆಕ್ಕಿನ ವಾಸ್ತವಿಕತೆಯಲ್ಲಿ ಅಂದರೆ ಚೆಕ್ಕಿನಲ್ಲಿರುವ ಸಹಿ ಮತ್ತು ಇತರ ಬರಹದಲ್ಲಿ ಉಂಟಾಗಿರುವ ಶಾಯಿಯ ವ್ಯತ್ಯಾಸ, ಅವಧಿಯ ವ್ಯತ್ಯಾಸ ಅಥವಾ ಆರೋಪಿಯ ಸಹಿಯನ್ನು ಫೋರ್ಜರಿ ಆಗಿರುವ ಸಂದರ್ಭದಲ್ಲಿ ಆರೋಪಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸಮ್ಮಂದಪಟ್ಟ ಕೈಬರಹ ತಜ್ಞರ ಅಭಿಪ್ರಾಯ ಕುರಿತು ವರದಿಯನ್ನು ತರಿಸಿಕೊಂಡು ತನ್ನ ರಕ್ಷಣಾತ್ಮಕ ನಿಲುವನ್ನು ಸಮರ್ಥಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾನೆ.

2. ಚೆಕ್ಕು ಅಮಾನ್ಯಗೊಂಡ ಸಂದರ್ಭದಲ್ಲಿ ಚೆಕ್ಕು ಹೊಂದಿರುವ ವ್ಯಕ್ತಿ ಚೆಕ್ಕು ನೀಡಿದಾತನಿಗೆ ಅಥವಾ ಚೆಕ್ಕಿಗೆ ಸಮ್ಮಂದಪಟ್ಟ ಬ್ಯಾಂಕ್ ಖಾತೆ ಹೊಂದಿರುವ ವ್ಯಕ್ತಿಗೆ ನೀಡುವ ಯಾವುದೇ ನೋಟೀಸಿಗೆ ನೋಟೀಸು ಪಡೆದ ವ್ಯಕ್ತಿ ಆ ಕೂಡಲೇ ತನ್ನ ವಕೀಲರನ್ನು ಸಂಪರ್ಕಿಸಿ ಸೂಕ್ತ ಜವಾಬನ್ನು ನೀಡುವುದು ಅವಶ್ಯಕವಾಗಿರುತ್ತದೆ. ಏಕೆಂದರೆ ಈ ರೀತಿಯ ನೋಟೀಸಿಗೆ ಉತ್ತರ ಕೊಡದೇ ಇದ್ದಾಗ ಚೆಕ್ಕು ನೀಡಿದ ವ್ಯಕ್ತಿ ಅಥವಾ ಚೆಕ್ಕಿಗೆ ಸಮ್ಮಂದಪಟ್ಟ ಬ್ಯಾಂಕ್ ಖಾತೆ ಹೊಂದಿರುವ ವ್ಯಕ್ತಿಯು ಮುಂದೆ ನ್ಯಾಯಾಲಯದಲ್ಲಿ ತನ್ನ ರಕ್ಷಣಾತ್ಮಕ ವಾದವನ್ನು ಅಥವಾ ನಿಲುವನ್ನು ಸಮರ್ಥಿಸಿಕೊಳ್ಳುವ ಹಕ್ಕನ್ನು ಕಳೆದುಕೊಳ್ಳುತ್ತಾನೆ ಮಾತ್ರವಲ್ಲದೆ ಚೆಕ್ಕು ವ್ಯವಹಾರಕ್ಕೆ ಸಮ್ಮಂದಪಟ್ಟ ‘ವರ್ಗಾವಣೆ ಲಿಖಿತ ಪತ್ರಗಳ ಕಾಯ್ದೆ’ (ಓegoಣiಚಿbಟe Iಟಿsಣಡಿumeಟಿಣs ಂಛಿಣ) ಪ್ರಕಾರ ಚೆಕ್ಕು ಹೊಂದಿರುವ ವ್ಯಕ್ತಿ ಅಂದರೆ ಚೆಕ್ ಧಾರಕನು ನೀಡಿರುವ ನೋಟೀಸಿನ ಅಂಶಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಂತೆ ಎನ್ನುವ ಪೂರ್ವ ಭಾವನೆ ಮೂಡುತ್ತ

3. ಚೆಕ್ಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿ ನ್ಯಾಯಾಲಯದಿಂದ ಸಮನ್ಸ್ ಸ್ವೀಕರಿಸಿದ ಸಂದರ್ಭದಲ್ಲಿ ಆರೋಪಿಯು ಸಮನ್ಸ್‌ ನಲ್ಲಿ ನಿಗದಿಪಡಿಸಿರುವ ದಿನಾಂಕದಂದು ತನ್ನ ವಕೀಲರ ಮೂಲಕ ಹಾಜರಾಗಿ ಸೂಕ್ತವಾದ ಮುಚ್ಚಳಿಕೆಯನ್ನು ನ್ಯಾಯಾಲಯದ ಶರತ್ತುಗಳಿಗನುಸಾರವಾಗಿ ನೀಡಿ ಸೂಕ್ತ ಜಾಮೀನನ್ನು ಪಡೆಯುವುದು ಅವಶ್ಯಕವಾಗಿರುತ್ತದೆ. ಇಲ್ಲವಾದಲ್ಲಿ ನ್ಯಾಯಾಲಯವು ಆರೋಪಿಯ ವಿರುದ್ಧ ಜಾಮೀನುರಹಿತ ವಾರಂಟನ್ನು ಹೊರಡಿಸಿ ಪೋಲೀಸರ ಮೂಲಕ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ಕಾನೂನು ಪ್ರಕ್ರಿಯೆಯನ್ನು ನಡೆಸಬೇಕಾಗುತ್ತದೆ.
ಕೆ. ವಿಜೇಂದ್ರ ಕುಮಾರ್,
ಹಿರಿಯ ನ್ಯಾಯವಾದಿ, ಕಾರ್ಕಳ.
ಮೊ: 9845232490

ಕೆ. ವಿಜೇಂದ್ರ ಕುಮಾರ್




























































































































































































































error: Content is protected !!
Scroll to Top