ಕಾರ್ಕಳದ 100 ಮನೆಗಳಲ್ಲಿ ಪೈಪ್‌ ಕಾಂಪೋಸ್ಟ್‌ ಅಳವಡಿಕೆ ಪೂರ್ಣ

ಕಾರ್ಕಳ : ಪುರಸಭೆ ಮತ್ತು ರೋಟರಿ ಆನ್ಸ್ ಕ್ಲಬ್, ರೋಟರ್ಯಾಕ್ಟ್ ಕ್ಲಬ್ ಕಾರ್ಕಳ ಆಶ್ರಯದಲ್ಲಿ ಹಮ್ಮಿಕೊಂಡ ಪೈಪ್‌ ಕಾಂಪೋಸ್ಟ್‌ ಅಳವಡಿಕೆ 100 ಕಡೆ ಪೂರ್ಣಗೊಂಡಿದೆ. ಪುರಸಭಾ ವ್ಯಾಪ್ತಿಯ ಆಯ್ದ 100 ಮನೆಗಳಿಗೆ ಭೇಟಿ ನೀಡಿ ಪೈಪ್ ಕಾಂಪೋಸ್ಟ್ ಅಳವಡಿಸಲಾಗಿದೆ. ರೋಟರಿ ಆನ್ಸ್‌ ಕ್ಲಬ್‌ ಅಧ್ಯಕ್ಷೆ ರಮಿತಾ ಶೈಲೇಂದ್ರ ಅವರ ನೇತೃತ್ವದಲ್ಲಿ ಪೈಪ್‌ ಕಾಂಪೋಸ್ಟ್‌ ಅಳವಡಿಕೆ, ಸಾರ್ವಜನಿಕರಿಗೆ ಬಳಕೆ ಕುರಿತು ಮಾಹಿತಿ ನೀಡಲಾಗಿದೆ. ಡಿ. 25ರಂದು ರೋಟರಿ ಸದಸ್ಯ ತುಕಾರಾಮ ನಾಯಕ್ ಅವರ ಮನೆಯಲ್ಲಿ 100 ಪೈಪ್‌ ಕಾಂಪೋಸ್ಟ್‌ ಅಳವಡಿಸಲಾಗಿದೆ. ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಸದಸ್ಯ ಪ್ರದೀಪ್, ಸ್ವಚ್ಛ ಬ್ರಿಗೇಡ್ ಸದಸ್ಯರಾದ ರಾಜೇಂದ್ರ ಅಮೀನ್, ಪೆರ್ವಾಜೆ ವಿಘ್ನೇಶ್, ನಿಖಿಲ್ ಆಚಾರ್ಯ, ಪ್ರಮೋದ್ ಪಾಠಕ್‌, ಮಂಜುನಾಥ ಪೈ, ರೋಟಾರ್ಯಾಕ್ಟ್ ಕ್ಲಬ್ ಅಧ್ಯಕ್ಷ ರಾಹುಲ್ ರಾಜೇಶ್, ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಪ್ರಶಾಂತ್ ಆಚಾರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪುರಸಭಾ ಸದಸ್ಯರ ಸಹಕಾರದೊಂದಿಗೆ ಈಗಾಗಲೇ ಕಾರ್ಕಳದ 100 ಮನೆಗಳಲ್ಲಿ ಪೈಪ್‌ ಕಾಂಪೋಸ್ಟ್‌ ಅಳವಡಿಸಲಾಗಿದೆ. ಪೈಪ್‌ ಕಾಂಪೋಸ್ಟ್‌ ಅಳವಡಿಕೆ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ನೀಡಲಾದ ಮಾಹಿತಿಗೆ ಸಾರ್ವಜನಿಕ ವಲಯದಿಂದ ಉತ್ತಮ ಬೆಂಬಲ ದೊರೆತಿದೆ.

ರಮಿತಾ ಶೈಲೇಂದ್ರ ರಾವ್‌
ಅಧ್ಯಕ್ಷರು, ರೋಟರಿ ಆನ್ಸ್‌ ಕ್ಲಬ್‌















































































error: Content is protected !!
Scroll to Top