ಬೋಧನೆ-ಸಂಶೋಧನೆಯಲ್ಲಿ ಮಹತ್ತರ ಬೆಳವಣಿಗೆಯಾಗುತ್ತಿರುವುದು ಸ್ವಾಗತಾರ್ಹ- ಡಾ| ಗೋಪಾಲ್ ಮುಗೆರಾಯ

ಕಾರ್ಕಳ : ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಮಹತ್ತರ ಬೆಳವಣಿಗೆಗಳಾಗುತ್ತಿದ್ದು, ಅಂತರ್‍ ವಿಭಾಗೀಯ ಬೋಧನೆ, ಸಂಶೋಧನೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿರುವುದು ಸ್ವಾಗತಾರ್ಹ ಎಂದು ಗೋವಾದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ| ಗೋಪಾಲ ಮುಗೆರಾಯ ಅಭಿಪ್ರಾಯಪಟ್ಟರು.

ಅವರು ಡಿ. 22 ಹಾಗೂ 23 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಎಮರ್ಜಿಂಗ್ ಟ್ರೆಂಡ್ಸ್ ಇನ್ ಇಂಜಿನಿಯರಿಂಗ್ ಅಂತಾರಾಷ್ಟ್ರೀಯ ಮಟ್ಟದ ಆನ್ ಲೈನ್ ಮಲ್ಟಿ ಕಾನ್ಫರೆನ್ಸ್ ಐ.ಸಿ.ಇ.ಟಿ.ಇ-2020 ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಎನ್. ಚಿಪ್ಳೂಣ್ಕರ್, 2002 ರಲ್ಲಿ ಎಂಟೆಕ್ ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧ ಮಂಡನೆಗೆಂದು ಆರಂಭಗೊಂಡ ರಾಜ್ಯ ಮಟ್ಟದ ಪಿ.ಜಿ. ಫೆಸ್ಟ್ ಇದೀಗ ಅಂತಾರಾಷ್ಟ್ರೀಯ ಮಟ್ಟದ ಮಲ್ಟಿಕಾನ್ಫರೆನ್ಸ್ ಆಗಿ ಬೆಳೆದಿರುವುದು ಸಂತಸ ತಂದಿದೆ. ಸಂಶೋಧನಾ ಕ್ಷೇತ್ರದ ಆಸಕ್ತಿ ವೃದ್ಧಿಸಲು ಇಂತಹ ಕಾನ್ಫರೆನ್ಸ್‍ಗಳಲ್ಲಿ ಆಯೋಜಿಸಲಾಗುತ್ತಿದೆ.
ಕಾನ್ಫರೆನ್ಸ್‍ನ ಆಯೋಜಕ ಹಾಗೂ ರಿಸರ್ಚ್ ವಿಭಾಗದ ಡೀನ್ ಡಾ| ಸುದೇಶ್ ಬೇಕಲ್ ಸ್ವಾಗತಿಸಿ, ಕಾನ್ಫರೆನ್ಸ್‌ನ ಸಹಸಂಯೋಜಕ ಹಾಗೂ ಪಿ.ಜಿ. ವಿಭಾಗದ ಕಾರ್ಡಿನೇಟರ್ ಡಾ| ಮುರಳೀಧರ ಪ್ರಾಸ್ತವಿಕ ಮಾತುಗಳನ್ನಾಡಿದರು. ಹ್ಯೂಮ್ಯಾನಿಟೀಸ್ ವಿಭಾಗದ ಸಹಪ್ರಾಧ್ಯಾಪಕ ಸಂದೀಪ್ ಖಾರ್ವಿ ಹಾಗೂ ಕಂಪ್ಯೂಟರ್‍ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕಿ ಶೃತಿ ಕಾರ್ಯಕ್ರಮ ನಿರೂಪಿಸಿ, ಡಾ| ವೆಂಕಟೇಶ್ ಕಾಮತ್ ವಂದಿಸಿದರು.













































































error: Content is protected !!
Scroll to Top