ಪಳ್ಳಿ : ಚಿನ್ನದ ಚೈನ್‌ ಕಳವಿಗೆ ಯತ್ನ

ಕಾರ್ಕಳ : ಬೈಕ್ ನಲ್ಲಿ ಬಂದ ಯುವಕನೊಬ್ಬ ರಸ್ತೆ ಬದಿಯಲ್ಲಿ ಮಾತನಾಡುತ್ತಿದ್ದ ಯುವತಿಯೊಬ್ಬಳ ಕತ್ತಿಗೆ ಕೈ ಹಾಕಿ ಚಿನ್ನದ ಚೈನ್ ಎಗರಿಸಲು ವಿಫಲ ಯತ್ನ ಪಳ್ಳಿ ಗ್ರಾಮದಲ್ಲಿ ನಡೆದಿದೆ. ಪಳ್ಳಿ ಗ್ರಾಮದ ಹೊಸ ಸೇತುವೆ ಬಳಿಯಲ್ಲಿ ಡಿ. 22ರ ಸಂಜೆ ಕಲ್ಲಾಪು ಬ್ರಹ್ಮ ದೇವಸ್ಥಾನ ಸಮೀಪದ ನಿವಾಸಿ ವಿಜಯಶ್ರೀ ಸ್ನೇಹಿತೆ ನವ್ಯಾರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಬೈಕ್‌ನಲ್ಲಿ (KA20EW 1080) ಬಂದ ಯುವಕ ಏಕಾಏಕಿಯಾಗಿ ವಿಜಯಶ್ರೀ ಅವರ ಕತ್ತಿಗೆ ಕೈ ಹಾಕಿ ಚಿನ್ನದ ಚೈನ್ ಕಳವಿಗೆ ಪ್ರಯತ್ನಿಸಿರುತ್ತಾನೆ. ಸುಮಾರು 20ರಿಂದ 25 ವರ್ಷದ ಸಪೂರ ಶರೀರ ಹೊಂದಿರುವ ಯುವಕ ಕಳವಿಗೆ ಯತ್ನ ಮಾಡಿರುವುದಾಗಿ ವಿಜಯಶ್ರೀ ಅವರು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ.









































































































error: Content is protected !!
Scroll to Top