ಸ್ವಚ್ಛ ಕಾರ್ಕಳ ಬ್ರಿಗೇಡ್ ನೇತೃತ್ವದಲ್ಲಿ 50ನೇ ಸ್ವಚ್ಛತಾ ಅಭಿಯಾನ

ಕಾರ್ಕಳ : ಡಿ.20 ಭಾನುವಾರದಂದು ಸ್ವಚ್ಛ ಕಾರ್ಕಳ ಬ್ರಿಗೇಡ್ ನೇತೃತ್ವದಲ್ಲಿ 50ನೇ ಸ್ವಚ್ಛತಾ ಅಭಿಯಾನವು ಕುದುರೆಮುಖ ಚೆಕ್ ಪೋಸ್ಟ್, ಮುಳ್ಳೂರು-ಮಾಳದ ಬಳಿ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಮಾನ್ಯ ಶಾಸಕರಾದ ವಿ. ಸುನಿಲ್ ಕುಮಾರ್, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ.ಕೆ. ವಿಜಯ ಕುಮಾರ್ ಚಾಲನೆ ನೀಡಿ ಶುಭಹಾರೈಸಿದರು.
ಸ್ವಚ್ಛ ಅಭಿಯಾನದಲ್ಲಿ ಕ್ಲೀನ್ ಕುಂದಾಪುರ, ವಿಶ್ವಕರ್ಮ ಯುವ ವೇದಿಕೆ ನಿಟ್ಟೆ, ಸದ್ಭಾವನಾ ಬ್ರಿಗೇಡ್ ಮಾಳ, ಯುವಶಕ್ತಿ ಮಾಳ ತಂಡಗಳ ಸದಸ್ಯರು ಭಾಗವಹಿಸಿದರು. ಇಲ್ಲಿನ ಸ್ಥಳೀಯ ಅಂಗಡಿ ಮಾಲಕರಿಗೆ ಸ್ವಚ್ಛತೆ ಅರಿವು ಮೂಡಿಸುವ ದೃಷ್ಟಿಯಿಂದ ಕೆಲವು ಮಾಹಿತಿಯನ್ನು ಮತ್ತು ಕಸದ ಬುಟ್ಟಿಗಳನ್ನು ನೀಡಲಾಯಿತು.


ಅಭಿಯಾನದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಪ್ರಮುಖರಾದ ಫೆಲಿಕ್ಸ್ ವಾಜ್, ನಿಟ್ಟೆ ಗ್ರಾಮ ಘನತ್ಯಾಜ್ಯ ನಿರ್ವಹಣಾ ಘಟಕದ ನಿರ್ವಹಣಾ ಅಧಿಕಾರಿ ನೀಲಾದರ್, ಶಿರ್ಲಾಲು ಘಣತ್ಯಾಜ ನಿರ್ವಹಣ ಘಟಕ ನಿರ್ವಹಣಾಧಿಕಾರಿ ಸುನಿತಾ, ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಶ್ರೀ ರಾಮನಾಥ ಬಾಳಿಗ ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸದಸ್ಯ ಸುಬ್ರಮಣ್ಯ ದೇವಾಡಿಗ ಇವರು ನಿರ್ವಹಿಸಿದರು.



















error: Content is protected !!
Scroll to Top