ಕಾರ್ಕಳ : ಕರ್ತವ್ಯದಲ್ಲಿ ಪ್ರಾಮಾಣಿಕೆ, ದಕ್ಷತೆಯಿದ್ದಾಗ ಮಾತ್ರ ಮನಸ್ಸಿಗೆ ನೆಮ್ಮದಿ ದೊರೆಯುವುದು. ಹೆಬ್ರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಇಲ್ಲಿನ ಜನತೆ ಸಹಕಾರ ಸ್ಮರಣೀಯವೆಂದು ನಿವೃತ್ತ ಎಸ್‌ಐ ಮಹಾಬಲ ಶೆಟ್ಟಿ ಹೇಳಿದರು.
ಅವರು ಡಿ. 21ರಂದು ಹೆಬ್ರಿ ಬಂಟರ ಭವನದಲ್ಲಿ ನಡೆದ ಹೆಬ್ರಿ ಅಜೆಕಾರು ವಲಯ ಬಂಟರ ಯಾನೆ ನಾಡವರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈಯುವ ಸಮಾಜ ಬಾಂಧವರಿಗೆ ಸಂಘ ಸದಾ ಪ್ರೋತ್ಸಾಹ ನೀಡುತ್ತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಆರ್ಥಿಕವಾಗಿ ಸದೃಡವಾಗಿ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದರು.
ಸಂಘದ ಯಶಸ್ಸಿಗೆ ಸಹಕರಿಸಿ
ಸಂಘದ ಲಾಭಾಂಶದಲ್ಲಿ ಬಡ ವಿದ್ಯಾರ್ಥಿಗಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಕಟ್ಟಲು, ಮದುವೆಯಾಗುವ ಬಡ ಹೆಣ್ಣು ಮಕ್ಕಳಿಗೆ ನೆರವು ನೀಡಲಾಗುವುದು. ಈ ಮೂಲಕ ಸಂಘವನ್ನು ಸ್ಥಾಪಿಸಿದ ಉದ್ದೇಶ ಈಡೇರಿಸಲಾಗುತ್ತಿದೆ. ಸಂಘ ಯಶಸ್ಸಿಗೆ ಸಮಾಜದ ಸರ್ವರೂ ಸಹಕರಿಸಬೇಕೆಂದು ಉದಯ ಶೆಟ್ಟಿ ಮುನಿಯಾಲು ಮನವಿ ಮಾಡಿಕೊಂಡರು.
ಸಂಘದ ಗೌರವಾಧ್ಯಕ್ಷ ರಮಾನಂದ ಹೆಗ್ಡೆ, ಎಳಗೋಳಿ ಬೋಜ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಬಾನು ಪಿ. ಬಲ್ಲಾಳ್, ಮಾತೃ ಸಂಘದ ನಿರ್ದೇಶಕಿ ಪ್ರಮೋದಾ ರಾಜ್‍ಕುಮಾರ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಶಂಕರ ಶೆಟ್ಟಿ, ವಾದಿರಾಜ ಶೆಟ್ಟಿ, ಹರ್ಷ ಶೆಟ್ಟಿ, ಯಶೋಧ ಶೆಟ್ಟಿ , ನಿರ್ಮಲ ಎಸ್. ಹೆಗ್ಡೆ, ಜ್ಯೋತಿ ಕೆ. ಶೆಟ್ಟಿ, ಸಂತೋಷ್ ಶೆಟ್ಟಿ, ಶಾಂತಾ ಮಹಾಬಲ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಮಾತೃಸಂಘದ ನಿರ್ದೇಶಕ ಬಿ. ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.









