ಹೆಬ್ರಿ : ಹೆಬ್ರಿ ತಾಲೂಕಿನ 9 ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯರಕೋಡು ಶಾಲೆಯ ಮತಗಟ್ಟೆ ಬೆಳಿಗ್ಗೆ ಅರ್ಧ ಗಂಟೆ ತಡವಾಗಿ ಮತದಾನ ಆರಂಭಗೊಂಡಿತು. ಕುಚ್ಚೂರು ಶಾಲಾ ಮತಗಟ್ಟೆ ಸೇರಿ 3 ಕಡೆ ಅಭ್ಯರ್ಥಿಗಳ ಪರವಾಗಿ ಮತಗಟ್ಟೆಯೊಳಗಡೆ ಮತಯಾಚನೆ ನಡೆಸಿರುವುದು ಕಂಡುಬಂದಿದ್ದು, ಬಳಿಕ ಪೊಲೀಸರು ಎಚ್ಚರಿಕೆ ನೀಡಿ ಹೊರ ಕಳಿಸಿದರು. ಹೆಬ್ರಿ ತಾಲೂಕಿನ ಚುನಾವಣಾಧಿಕಾರಿ ತಹಶೀಲ್ದಾರ್ ಕೆ. ಪುರಂದರ್, ಹೆಬ್ರಿ ಸಬ್ ಇನ್ಸ್ ಫೆಕ್ಟರ್ ಸುಮಾ ಬಿ. ಮತ್ತಿತರ ಅಧಿಕಾರಿಗಳು ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಹೆಬ್ರಿಯಲ್ಲಿ 274 ಸಿಬ್ಬಂದಿ ಮತ್ತು 130 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ನಕ್ಸಲ್ ಪೀಡಿತ ಪ್ರದೇಶ ಮತಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.
ಹೆಬ್ರಿ : ಶಾಂತಿಯುತ ಮತದಾನ






































