ರೋಟರಿ ಆ್ಯನ್ಸ್ ಕ್ಲಬ್‌ನ ಬೆಳಕು ನೀಡುವ ಕಾರ್ಯ‌ ಶ್ಲಾಘನೀಯ : ಸುಮಾ ಕೇಶವ್‌

ಕಾರ್ಕಳ, ಡಿ.7 : ಕರುಣಾಳು ಬಾ ಬೆಳಕೆ ಎಂಬ ಧ್ಯೇಯದೊಂದಿಗೆ ಆ್ಯನ್ಸ್ ಕ್ಲಬ್ ಕಾರ್ಕಳ, ಯುವವಾಹಿನಿ ಘಟಕ ಕಾರ್ಕಳ ಹಾಗೂ ರೋಟರಾಕ್ಟ್ ಕ್ಲಬ್ ಕಾರ್ಕಳ ಇವರ ಆಶ್ರಯದಲ್ಲಿ ಪ್ರಾರಂಭವಾದ ಒಂದು ಕಾರ್ಯಕ್ರಮವು ಕಾರ್ಕಳದ ಸುತ್ತಮುತ್ತಲಿನ ಬೆಳಕನ್ನು ಕಾಣದಿರುವ ಮನೆಗಳಲ್ಲಿ ಬೆಳಕು ಮೂಡಿಸುವ ಪ್ರಯತ್ನ ಮಾಡುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಕಾರ್ಯ ಎಂದು ಪುರಸಭೆ ಅಧ್ಯಕ್ಷೆ ಸುಮಾ ಕೇಶವ್ ಅವರು ಹೇಳಿದರು.
ಕರುಣಾಳು ಬಾ ಬೆಳಕೆ ಕಾರ್ಯಕ್ರಮದ ಅಂಗವಾಗಿ ಕೆಲ ಸಮಯದ ಹಿಂದೆ ಒಂದೇ ದಿನ 6 ಮನೆಗಳಿಗೆ ಸೋಲಾರ್ ಲೈಟ್ ಅನ್ನು ವಿವಿಧ ದಾನಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಳವಡಿಸಲಾಯಿತು. ಈ ವರೆಗೆ ಸುಮಾರು 1,10,000 ರೂ. ವೆಚ್ಚದಲ್ಲಿ 16 ಮನೆಗಳಿಗೆ ಲೈಟ್ ಅಳವಡಿಸಲಾಗಿದೆ. ಕಾರ್ಯಕ್ರಮದಲ್ಲಿ ದಾನಿಗಳಾದ ಸುಪ್ರೀತ್ ಶೆಟ್ಟಿ ದಂಪತಿ, ಸಾವಿತ್ರಿ ಮನೋಹರ್, ಶಾರದಾ ಮಹಿಳಾ ಮಂಡಳಿ ಸದಸ್ಯರು, ಪ್ರಜ್ವಲ್ ಉಪಸ್ಥಿತರಿದ್ದರು. ರೋಟರಿ ಆನ್ಸ್ ಕ್ಲಬ್ ನ ಅಧ್ಯಕ್ಷೆ ರಮಿತಾ ಶೈಲೆಂದ್ರ ರಾವ್, ಯುವ ವಾಹಿನಿಯ ಗಣೇಶ್ ಸಾಲ್ಯಾನ್ ಹಾಗೂ ಯುವವಾಹಿನಿ ಕಾರ್ಕಳ ಸದಸ್ಯರು , ರೋಟರಾಕ್ಟ್ ಕ್ಲಬ್ ನ ಅಧ್ಯಕ್ಷ ರಾಹುಲ್ ಮತ್ತು ಸದಸ್ಯರು ಭಾಗವಹಿಸಿದರು.



































































































error: Content is protected !!
Scroll to Top