ಖ್ಯಾತ ಸಾಹಿತಿ ಉದ್ಯಾವರ ಮಾಧವ ಆಚಾರ್ಯ ನಿಧನ

ಉಡುಪಿ, ಡಿ.7 : ಖ್ಯಾತ ಸಾಹಿತಿ, ರಂಗಕರ್ಮಿ ಪ್ರೊ. ಉದ್ಯಾವರ ಮಾಧವ ಆಚಾರ್ಯ (79) ಅವರು ಇಂದು ನಿಧನರಾಗಿದ್ದಾರೆ.ಅವರು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು. ಅರ್ಥಶಾಸ್ತ್ರ ಉಪನ್ಯಾಸಕರಾಗಿ ನಿವೃತ್ತರಾಗಿದ್ದ ಉದ್ಯಾವರ ಮಾಧವ ಆಚಾರ್ಯ ಅವರು ಸಾಹಿತಿ ಮತ್ತು ರಂಗಕರ್ಮಿಯಾಗಿ ಮಾತ್ರವಲ್ಲದೆ ನೃತ್ಯ ರೂಪಕ ರಚನೆಕಾರನಾಗಿ, ನಿರ್ದೇಶಕನಾಗಿ, ನಾಟಕಕಾರನಾಗಿ, ವಿಮರ್ಶಕನಾಗಿ ಖ್ಯಾತರಾಗಿದ್ದರು. ಬಾಗಿದ ಮರ, ಬಾಗದೊಡ್ಡಮ್ಮನ ಕಥೆ, ಬೆಳಕಿನೆಡೆಗೆ, ಹಾದಿ ಮುಂತಾದ ಕಥಾಸಂಕಲನಗಳನ್ನು, ರಂಗಪ್ರಬಂಧಗಳು, ನೃತ್ಯ ಪ್ರಬಂಧಗಳು, ಯಕ್ಷ ಪ್ರಬಂಧಗಳು, ಸಾಹಿತ್ಯ ಸ್ಪಂದನ ಎಂಬ ಪ್ರಬಂಧ ಸಂಕಲನಗಳನ್ನು, ರಂಗಸ್ಥಳದ ಕನವರಿಕೆಗಳು, ಹೂ ಮಿಡಿ ಹಾಡು, ರಾಧೆ ಎಂಬ ಗಾಥೆ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇದ್ದಕ್ಕಿದ್ದಂತೆ ನಾಟಕ, ಎಡೆಯೊಳಗಣ ನಾಟಕ, ಗೋಡೆ, ಕೃಷ್ಣನ ಸೋಲು, ರಾಣಿ ಅಬ್ಬಕ್ಕ ದೇವಿ ಎಂಬ ನಾಟಕಗಳನ್ನು ರಚಿಸಿದ್ದಾರೆ. 15ಕ್ಕೂ ಹೆಚ್ಚು ನೃತ್ಯ ರೂಪಕಗಳನ್ನು ರಚಿಸಿದ್ದಾರೆ ,ನೂರಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ.





























































































































































































































error: Content is protected !!
Scroll to Top